ಗುಡ್ಡೆಹೊಸೂರು, ಅ. 21: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ- ದುಬಾರೆ ರಸ್ತೆ ರಸ್ತೆಯ ತಿರುವಿನಲ್ಲಿ ಅಳವಡಿಸಿದ್ದ ರಸ್ತೆಯ ಉಬ್ಬು ತುಂಡಾಗಿ ಅದಕ್ಕೆ ಅಳವಡಿಸಿದ್ದ ಕಬ್ಬಿಣದ ಬೋಲ್ಟ್ಗಳು ಮೇಲೆ ಕಾಣುತ್ತಿದ್ದವು. ಇದರಿಂದ ಹಲವು ವಾಹನಗಳ ಟಯರ್ ಪಂಚರ್ ಆಗಿದ್ದವು. ಸ್ಥಳೀಯ ಹಿರಿಯ ನಾಗರಿಕರಾದ ರವಿಶಂಕರ್ ಅವರು ಸುತ್ತಿಗೆ ಹಿಡಿದು ಬೋಲ್ಟ್ಗಳನ್ನು ತೆಗೆದು ಮಾನವೀಯತೆ ಮರೆದಿದ್ದಾರೆ.
- ಗಣೇಶ್ ಕುಡೆಕಲ್