ಸಿದ್ದಾಪುರ, ಅ. 21: ಜಿಲ್ಲೆಯ ಧಾರ್ಮಿಕ-ಲೌಖಿಕ ವಿದ್ಯಾಕೇಂದ್ರ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಮೀಲಾದುನ್ನಬಿ ಕಾನ್ಫರೆನ್ಸ್ ಸಂಸ್ಥೆಯ ಅಧ್ಯಕ್ಷ ಎಂ.ಎಂ ಮುಸ್ತಫಾ ಅವರ ಅಧ್ಯಕ್ಷತೆಯಲ್ಲಿ ದಾರುನ್ನಜಾತ್ ಕ್ಯಾಂಪಸ್‍ನಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಿತು.
ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿಯ ನೂತನ ಮದರಸ ಕಟ್ಟಡವನ್ನು ಸಯ್ಯಿದ್ ಶಾಫಿ ಜಮಲುಲ್ಲೈಲಿ ತಂಙಳ್ ಮಾರ್ನಹಳ್ಳಿ ಉದ್ಘಾಟಿಸಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್‍ಗೆ ನೇತೃತ್ವ ನೀಡಿದರು. ನಂತರ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಸಯ್ಯಿದ್ ಖಾತಿಂ ತಂಙಳ್ ಅಲ್ ಐದರೂಸಿ, ಬಶೀರ್ ಸಖಾಫಿ ತ್ಯಾಗತ್ತೂರು, ಝುಬೈರ್ ಸಅದಿ ಅಲ್ ಅಫ್ಳಲಿ ನೇತೃತ್ವದಲ್ಲಿ ನಡೆಯಿತು.
ಮದರಸಾ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ, ಮೀಲಾದ್ ರ್ಯಾಲಿ ಹಾಗೂ ರಾತ್ರಿ ಸ್ವಲಾತ್ ಮಜ್ಲಿಸ್ ಹಾಗೂ ಸಮಾರೋಪ ಸಂಗಮ ಸಯ್ಯಿದ್ ಖಾತಿಂ ತಂಙಳ್ ಅಲ್ ಐದರೂಸಿ ನೇತೃತ್ವದಲ್ಲಿ ಜರುಗಿತು. ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ಉದ್ಘಾಟಿಸಿದರು. ನೆಲ್ಲಿಹುದಿಕೇರಿ ಜುಮಾ ಮಸ್ಜಿದ್ ಖತೀಬ್ ಸಿದ್ದೀಖ್ ರಹ್ಮಾನಿ ಹಾಗೂ ಮಸ್ಜಿದ್ ಆಡಳಿತ ಮಂಡಳಿಯ ಇಖ್ಬಾಲ್ ಮೌಲವಿ ದಿನದ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಶಿಹಾಬುದ್ದಿನ್ ತಂಞಳ್ ವಿಪಿಎಸ್, ಅಲವಿ ಹಾಜಿ, ಮಜೀದ್ ಸಿ.ಎಂ., ಖಾದರ್ ಎಂ.ಎ., ಅಬ್ದುಲ್ಲ ಪಿ.ಎ., ಹಂಝ ಸಿ.ಎಂ., ಹಸನ್ ಎನ್.ಎಂ., ರಶಾದ್, ಎಂ.ಎ. ರಫೀಕ್, ಎ.ಪಿ. ಉಮರ್, ನೆಲ್ಲಿಹುದಿಕೇರಿ ಜುಮಾ ಮಸ್ಜಿದ್ ಅಧ್ಯಕ್ಷ ಒ.ಎಂ. ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಅಶ್ರಫ್, ಲತೀಫ್ ಮುಂತಾದವರು ಉಪಸ್ಥಿತರಿದ್ದರು.
ನೆಲ್ಲಿಹುದಿಕೇರಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಹಾಗೂ ವಯಸ್ಕರು ಮತ್ತು ಪುಟಾಣಿ ವಿದ್ಯಾರ್ಥಿಗಳ ದಫ್ ಪ್ರದರ್ಶನ ನಡೆಯಿತು. ಸ್ವಾಗತ ಸಮಿತಿ ಸಂಚಾಲಕ ಕೆ.ಎಂ. ಬಾವ ಸ್ವಾಗತಿಸಿ, ವಂದಿಸಿದರು.