ಮಡಿಕೇರಿ, ಅ. 21: ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪುತ್ತಳಿ ಸ್ಥಾಪನೆಗೆ ಜನರಲ್ ತಿಮ್ಮಯ್ಯ ಶಾಲಾ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪÀ ಅಧ್ಯಕ್ಷತೆಯಲ್ಲಿ ಮಡಿಕೇರಿ ಶಾಲೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಡಿಕೇರಿಯ ಕೊಡವ ಸಮಾಜದ ಅಧೀನದಲ್ಲಿ ಜನರಲ್ ತಿಮ್ಮಯ್ಯ ಹೆಸರಿನಲ್ಲಿ ಶಾಲೆ ಪ್ರಾರಂಭವಾಗಿದೆ. ಉತ್ತಮ ಹೆಸರು ಗಳಿಸಿದೆ. ಶಾಲೆÉಯಲ್ಲಿ ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಜನರಲ್ ತಿಮ್ಮಯ್ಯ ಪುತ್ತಳಿ ಅನಾವರಣಗೊಳ್ಳಲಿದೆ. ಪುತ್ತಳಿ ನಿರ್ಮಾಣ ಕಾರ್ಯಕ್ಕೆ ಕನ್ನಂಡ ಸಂಪತ್ ನೇತೃತ್ವದಲ್ಲಿ ಉಪ ಸಮಿತಿಯನ್ನು ರಚಿಸಲಾಯಿತು. ಜನರಲ್ ತಿಮ್ಮಯ್ಯ ಪುತ್ತಳಿ ಸ್ಥಾಪನೆಗೆ ದಾನಿಗಳು ಮುಂದೆ ಬಂದರೆ ಸ್ವಾಗತಿಸುತೇವೆ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಸಂಚಾಲಕಿ ಕನ್ನಂಡ ಕವಿತ ಬೊಳ್ಳಪ್ಪ, ಸಮಾಜದ ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್, ಶಾಲಾ ಮುಖ್ಯೋಪದ್ಯಾಯಿನಿ ಕಲ್ಲ್‍ಮಾಡಂಡ ಸರಸ್ವತಿ ಚಂಗಪ್ಪ,, ಶಾಲಾ ಆಡಳಿತ ಮೇಲ್ವಿಚಾರಕಿ ಮುಕ್ಕಾಟಿರ ಪೊನ್ನಮ್ಮ, ನಿರ್ದೇಶಕರುಗಳಾದ ಕಾಳಚಂಡ ಅಪ್ಪಣ್ಣ, ಚೌರಿರ ಕಾವೇರಿ ಪೂವಯ್ಯ, ಬೊಪ್ಪಂಡ ಸರಳಾ ಕರುಂಬಯ್ಯ, ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಂಡಿರ ಸದಾ ಮುದ್ದಪ್ಪ, ಮೂವೇರ ಜಯರಾಂ, ನಂದಿನೆರವಂಡ ರವಿ ಬಸಪ್ಪ, ಪುತ್ತರಿರ ಕರುಣ್ ಕಾಳಯ್ಯ ಹಾಜರಿದ್ದರು.