ಗೋಣಿಕೊಪ್ಪ ವರದಿ, ಅ. ೨೨: ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜ, ಟಿ. ಶೆಟ್ಟಿಗೇರಿ ಗೌರಿ-ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ, ಸಾಂಸ್ಕೃತಿಕ ಸಂಸ್ಥೆ, ಕೊಡವ ತಕ್ಕ್ ಎಳ್ತ್ಕಾರಡ ಕೂಟ, ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸಹಯೋಗದಲ್ಲಿ ನಡೆಯುತ್ತಿರುವ ಕಾವೇರಿ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ತಂಡವು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ಕಲಾ ಪ್ರದರ್ಶನ ನೀಡಿ ಗಮನ ಸೆಳೆದರು.
ಪಾಲ್ಗೊಂಡ ೩೬ ಕಲಾವಿದರಲ್ಲಿ ೧೪ ಕಿರಿಯರು ಪಾಲ್ಗೊಂಡು ಗಮನ ಸೆಳೆದರು. ಹೆಣ್ಣು ಮಕ್ಕಳು ಉಮ್ಮತ್ತಾಟ್, ಪಾಟ್, ಪಳಂಜೊಲ್ಲ್, ಕವನ, ಏಳು ರೀತಿಯ ನೃತ್ಯ, ಕೋಲಾಟ್, ಪರೆಕಳಿ, ಕಪ್ಪೆಯಟ್, ವಾಲಗತ್ತಾಟ್ ನಡೆಸಿಕೊಟ್ಟರು. ಕಿರಿಯ ವಯಸ್ಸಿನ ಮುಕ್ಕಾಟೀರ ಹಿತೈಷಿ ನಾಣಯ್ಯ, ಚೆಟ್ಟಂಗಡ ಲೇಖನ ಶಮಿ ಪುಟ್ಟ ಹೆಜ್ಜೆ ಹಾಕಿ ಚಪ್ಪಳೆ ಗಿಟ್ಟಿಸಿಕೊಂಡರು.
ಪತ್ತಾಲೋದಿ, ಕಾವೇರಿ ಚಂಗ್ರಾAದಿ ಆಚರಣೆ ಬಗ್ಗೆ ಉಳುವಂಗಡ ಕಾವೇರಿ ಉದಯ ಮಾಹಿತಿ ನೀಡಿದರು. ಕೊಡವಾಮೆ ಮತ್ತು ಕಾವೇರಿ ತೀರ್ಥದ ವಿಚಾರವನ್ನು ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ತಿಳಿಸಿದರು. ತಂಡಕ್ಕೆ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾರ್ಗದರ್ಶನ ನೀಡಿದರು.