ಮಡಿಕೇರಿ, ಅ. ೨೦ : ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಸೇವಾ ಶುಲ್ಕ ತೆರಿಗೆ ಪಾವತಿಯಂತಹ ಅಗತ್ಯ ವ್ಯವಸ್ಥೆಗಳಿಗೆ ಜನತೆಗೆ ಮತ್ತಷ್ಟು ಅನುಕೂಲವಾಗುವಂತೆ ಇದೀಗ ನೂತನ ತಂತ್ರಜ್ಞಾನದ ವ್ಯವಸ್ಥೆಯನ್ನು ಬಳಸಿಕೊಳ್ಳುವ ಕ್ರಮ ಜಾರಿಗೆ ತರಲಾಗಿದೆ. ಆನ್ಲೈನ್ ಮೂಲಕ ಇರುವ ಸೌಲಭ್ಯಗಳಾದ ಭಾರತ್ ಬಿಲ್ ಪೇ, ಗೂಗಲ್ ಪೇ, ಫೋನ್ ಪೇ, ನೆಟ್ ಬ್ಯಾಂಕಿAಗ್ ನಂತಹ ವ್ಯವಸ್ಥೆಗಳ ಮೂಲಕವೂ ನಾಗರಿಕರು ತಮ್ಮ ಅಗತ್ಯತೆಗಳಿಗೆ ಬಳಸಿಕೊಳ್ಳಬಹುದಾದ ಕ್ರಮವನ್ನು ಜಾರಿಗೆ ತರಲಾಗಿದೆ. ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಾದ ಕಾರ್ಪೋರೇಷನ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯAತಹ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಗ್ರಾ.ಪಂ. ಹೊರತುಪಡಿಸಿ) ಈ ಕ್ರಮ ಜಾರಿಯಾಗಿದೆ.
ಇದೇ ಅಕ್ಟೋಬರ್ ೭ ರಿಂದ ಈ ತಂತ್ರಜ್ಞಾನವನ್ನು ಬಳಸಿಕೊಂಡು ನಾಗರಿಕರು ಎಲ್ಲಾ ರೀತಿಯ ಸೇವಾ ಶುಲ್ಕ, ತೆರಿಗೆಗಳನ್ನು ಪಾವತಿಸಬಹುದಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಹಿಂದೆ ತೆರಿಗೆ ಹಾಗೂ ಇತರ ಸೇವಾ ಶುಲ್ಕಗಳನ್ನು ಪಾವತಿಸಲು ಆಫ್ಲೈನ್ ಈ ಸ್ವೀಕೃತಿ ಚಲನ್ಗಳನ್ನು ಸೃಜಿಸಲಾಗುತ್ತಿತ್ತು. ಸಾರ್ವಜನಿಕರು ತಮ್ಮ ತೆರಿಗೆಗಳನ್ನು ಬ್ಯಾಂಕ್ಗಳಿಗೆ ತೆರಳಿ ನಗದು ಅಥವಾ ನೆಟ್ ಬ್ಯಾಂಕಿAಗ್ ಮೂಲಕ ಪಾವತಿಸುತ್ತಿದ್ದರು. ಇದೀಗ ಭಾರತ್ ಬಿಲ್ ಪೇ ಸಿಸ್ಟಂ (ಬಿ.ಬಿ.ಪಿ.ಎಸ್.) ಜಾರಿಯಾಗಿದೆ.
ಸಾರ್ವಜನಿಕರು ತೆರಿಗೆಗಳು ಹಾಗೂ ಇತರ ಸೇವಾ ಶುಲ್ಕಗಳನ್ನು ಪಾವತಿಸುವ ಸಂದರ್ಭದಲ್ಲಿ ಬಿ.ಬಿ.ಪಿ.ಎಸ್. ಚಲನ್ ಮೂಲಕ ಪಾವತಿಸುವ ಆಯ್ಕೆಯನ್ನು ಆರಿಸಿಕೊಂಡು ಮೊಬೈಲ್ ಸಂಖ್ಯೆಗಳನ್ನು ನೀಡಿ ಅವಕಾಶ ಪಡೆದುಕೊಳ್ಳಬಹುದಾಗಿದೆ.
ಬಿ.ಬಿ.ಪಿ.ಎಸ್. ಚಲನ್ ಸೃಜಿಸಿದ ಕೂಡಲೇ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಪಾವತಿಸಬೇಕಾದ ಚಲನ್ ಸಂಖ್ಯೆಯ ಸಂದೇಶವು ಲಭ್ಯವಾಗಿರುತ್ತದೆ. ತದನಂತರ ಲಭಿಸಿದ ಚಲನ್ ಸಂಖ್ಯೆಗಳನ್ನು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಇತರ ಬಿ.ಬಿ.ಪಿ.ಎಸ್. ತಂತ್ರಾAಶಗಳಲ್ಲಿ ಲಾಗಿನ್ ಮಾಡಿ ಬಿಲ್ ಪೇಮೆಂಟ್ ವಿಭಾಗದಲ್ಲಿ ಮುನ್ಸಿಪಲ್ ಟ್ಯಾಕ್ಸ್ ಸರ್ವೀಸ್ ಆಯ್ಕೆಯನ್ನು ಆರಿಸಿ ಅದರಲ್ಲಿ ಡೈರೆಕ್ಟ್ ಆಫ್ ಮುನ್ಸಿಫಲ್ ಅಡ್ಮಿನಿಷ್ಟೆçÃಷನ್ ಕರ್ನಾಟಕ ಆಯ್ಕೆ ಮಾಡಿ ಮುದ್ರಿತಗೊಂಡ ಚಲನ್ ಸಂಖ್ಯೆಯನ್ನು ನೋಂದಾಯಿಸಿಕೊAಡು ಸೇವಾಶುಲ್ಕ - ತೆರಿಗೆಗಳನ್ನು ಪಾವತಿ ಮಾಡಬಹುದಾಗಿದೆ. ಇದೀಗ ಜಾರಿಯಾಗಿರುವ ಈ ವ್ಯವಸ್ಥೆಯನ್ನು ನಾಗರಿಕರು ಬಳಸಿಕೊಳ್ಳುತ್ತಿದ್ದಾರೆ.