ಮಡಿಕೇರಿ, ಅ. ೨೦: ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದಲ್ಲಿ ತಾ. ೨೫ ರಂದು ಗ್ರಾಸ್ತಾಸ್ತ ಖಂಡಗ್ರಾಸ ಗ್ರಹಣ ಸಂಜೆ ೫.೧೧ ರಿಂದ ೬.೨೮ ನಿಮಿಷದ ತನಕ ಇರುವ ಹಿನ್ನೆಲೆ ದೇವಾಲಯಗಳಲ್ಲಿ ರೂಢಿ ಸಂಪ್ರದಾಯದAತೆ ಪೂಜಾ ವಿಧಿ - ವಿಧಾನಗಳಲ್ಲಿ ಬದಲಾವಣೆ ಇರಲಿದೆ.
ಶ್ರೀ ಭಗಂಡೇಶ್ವರ ದೇವಾಲಯದ ತ್ರಿವೇಣಿ ಸಂಗಮದಲ್ಲಿ ಬೆಳಿಗ್ಗೆ ೬ ಗಂಟೆಯಿAದ ಬೆಳಿಗ್ಗೆ ೧೧ ರವರೆಗೆ ಪಿಂಡ ಪ್ರದಾನ ಕಾರ್ಯ, ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಸೇವಾ ಕೈಂಕರ್ಯಗಳು ಬೆಳಿಗ್ಗೆ ೬ ಗಂಟೆಯಿAದ ಬೆಳಿಗ್ಗೆ ೧೨ ರ ತನಕ ನಡೆಯಲಿದೆ. ಗ್ರಾಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣ ಮೋಕ್ಷ ನಂತರ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಸಮಯ ರಾತ್ರಿ ೭ ರಿಂದ ನಿತ್ಯ ಪೂಜೆ ನೆರವೇರಿಸಲಾಗುತ್ತದೆ. ಶ್ರೀ ತಲಕಾವೇರಿ ದೇವಾಲಯದಲ್ಲಿ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೨.೩೦ ರವರೆಗೆ ಭಕ್ತಾದಿಗಳಿಗೆ ಸೇವಾ ಕೈಂಕರ್ಯಗಳನ್ನು ನೆರವೇರಿಸಲಾಗುವುದು. ನಂತರ ಯಾವುದೇ ಸೇವೆಗಳು ಇರುವುದಿಲ್ಲ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.