ನಾಪೋಕ್ಲು, ಅ. ೧೯: ನಾಪೋಕ್ಲುವಿನ ನಾಲ್‌ನಾಡ್ ಪ್ಲಾಂರ‍್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ದ್ವಿತೀಯ ವರ್ಷದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ತಾ.೨೪ರಂದು ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ತಿಳಿಸಿದ್ದಾರೆ.

ನಾಪೋಕ್ಲುವಿನ ನಾಲ್‌ನಾಡ್ ಪ್ಲಾಂರ‍್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಸಬಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ೦.೨೨ ರೈಫಲ್ ೫೦ ಮೀಟರ್ ರೇಂಜ್, ೨ನೇ ವಿಭಾಗ ೧೨ ಬೋರ್ ೩೦ ಮೀಟರ್ ರೇಂಜ್ ಮತ್ತು ಏರ್‌ಗನ್ ಎಗ್ ಶೂಟಿಂಗ್ ಸೇರಿದಂತೆ ಮೂರು ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ.

ಮೊದಲನೇ ವಿಭಾಗದಲ್ಲಿ ವಿಜೇತರಾದವರಿಗೆ ನಬಾರ್ಡ್ನ ನಿವೃತ್ತ ಡಿಡಿಎಂ ಮುಂಡAಡ ಸಿ.ನಾಣಯ್ಯ ಅವರು ತಮ್ಮ ತಂದೆ ಚಿಣ್ಣಪ್ಪ ಮತ್ತು ತಾಯಿ ಗೋಪಿ ಪೂವವ್ವ ಅವರ ಜ್ಞಾಪಕಾರ್ಥವಾಗಿ ರೂ.೫೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ಮಾಜಿ ಅಡಿಷನಲ್ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ತಮ್ಮ ತಂದೆ ಎ.ಕೆ.ಸುಬ್ಬಯ್ಯ ಮತ್ತು ತಾಯಿ ಪೊನ್ನಮ್ಮ ಅವರ ಜ್ಞಾಪಕಾರ್ಥವಾಗಿ ದ್ವಿತೀಯ ಬಹುಮಾನ ರೂ.೩೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ಯವಕಪಾಡಿಯ ಕಾಫಿ ಬೆಳೆಗಾರರಾದ ಪಾಂಡAಡ ಕಿಶನ್ ಪೂಣಚ್ಚ ಅವರು ನೀಡಿರುವ ತೃತೀಯ ಬಹುಮಾನ ರೂ.೨೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ೨ನೇ ವಿಭಾಗದಲ್ಲಿ ವಿಜೇತರಾದವರಿಗೆ ನೆಲಜಿಯ ಮಂಡೀರ ಜಯ ದೇವಯ್ಯ ಅವರು ನೀಡಿರುವ ಪ್ರಥಮ ಬಹುಮಾನ ರೂ.೨೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ಯವಕಪಾಡಿಯ ಅಂಜಪರವAಡ ಕುಶಾಲಪ್ಪ ಅವರು ತಮ್ಮ ತಂದೆ ಸದಾ ಅಯ್ಯಪ್ಪ ಅವರ ಜ್ಞಾಪಕಾರ್ಥವಾಗಿ ನೀಡಿರುವ ದ್ವಿತೀಯ ಬಹುಮಾನ ರೂ. ೧೫ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ನೆಲಜಿಯ ಕಾಫಿ ಬೆಳೆಗಾರರಾದ ಚೀಯಕ್‌ಪೂವಂಡ ಕಂಬು ನಂಜಪ್ಪ ಅವರು ತಮ್ಮ ಪತ್ನಿ ಮೀನಾಕ್ಷಿ ಅವರ ಜ್ಞಾಪಕಾರ್ಥವಾಗಿ ನೀಡಿರುವ ತೃತೀಯ ಬಹುಮಾನ ರೂ.೧೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದೆಂದು ತಿಳಿಸಿದರು.

ಕೋಳಿ ಮೊಟ್ಟೆಗೆ ಗುರಿ ಇಡುವುದದರಲ್ಲಿ ಪ್ರಥಮ ಬಹುಮಾನ ೫ ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ೩ ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ ೨ ಸಾವಿರ ನಗದು ಮತ್ತು ಟ್ರೋಫಿ ದಾನಿಗಳು ಅರೆಯಡ ಎಂ.ರತ್ನ ಪೆಮ್ಮಯ್ಯ ಕಾಫಿ ಬೆಳೆಗಾರರು ನಾಪೋಕ್ಲು ಇವರು ತಮ್ಮ ತಂದೆ ಎ.ಬಿ.ಮೇದಪ್ಪ ಅವರ ಜ್ಞಾಪಕಾರ್ಥವಾಗಿ ನೀಡಿದ್ದಾರೆ ಹಾಗೂ ಮುಳಿಯ ಜ್ಯುವೆಲ್ರ‍್ಸ್ ಅವರಿಂದ ಬೆಳ್ಳಿ ನಾಣ್ಯಗಳ ಉಡುಗೊರೆ ಇರುತ್ತದೆ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ ೯ ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ದಿ ತಾಮರ ಕೂರ್ಗ್ ರೆಸಾರ್ಟ್ನ ಸಲಹೆಗಾರ ಪಾಲಚಂಡ ಶಾಹಿ ಕರುಂಬಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚ್ಚೀರ ಎ.ಅಯ್ಯಪ್ಪ, ಕೊಡವ ನ್ಯಾಷನಲ್ ಕೌನ್ಸಿಲ್‌ನ ಸಂಚಾಲಕ ನಂದಿನೆರವAಡ ಯು. ನಾಚಪ್ಪ, ನಾಪೋಕ್ಲುವಿನ ಕಾಫಿ ಬೆಳೆಗಾರ ಬಿದ್ದಾಟಂಡ ಜೀವನ್ ಕರಿಯಪ್ಪ, ಉದ್ಯಮಿ ಮುಕ್ಕಾಟೀರ ಅಣ್ಣಯ್ಯ ಆಗಮಿಸಲಿದ್ದಾರೆ. ಸಂಜೆ ೪ ಗಂಟೆಗೆ ಅಸೋಸಿಯೇಷನ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಡಿಷನಲ್ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲಚೀರ ಎ.ಅಯ್ಯಪ್ಪ, ನಬಾರ್ಡ್ನ ನಿವೃತ್ತ ಡಿಡಿಎಂ ಮುಂಡAಡ ಸಿ. ನಾಣಯ್ಯ, ಬೆಂಗಳೂರಿನ ಕಾಟನ್ ವರ್ಲ್ಡ್ ಗಾರ್ಮೆಂಟ್ಸ್ನ ಬಾಚಂಗಡ ಜಯ ಮೊಣ್ಣಪ್ಪ, ಯವಕಪಾಡಿಯ ಕಾಫಿ ಬೆಳೆಗಾರರಾದ ಪಾಂಡAಡ ಕಿಶನ್ ಪೂಣಚ್ಚ, ಮಂಡೀರ ಜಯ ದೇವಯ್ಯ, ಯವಕಪಾಡಿಯ ಕಾಫಿ ಬೆಳೆಗಾರರಾದ ಅಂಜಪರವAಡ ಕುಶಾಲಪ್ಪ, ನೆಲಜಿಯ ಕಾಫಿ ಬೆಳೆಗಾರರಾದ ಚಿಯಕಪೂವಂಡ ಕುಂಬು ನಂಜಪ್ಪ, ನಾಪೋಕ್ಲುವಿನ ಕಾಫಿ ಬೆಳೆಗಾರರಾದ ಅರೆಯಡ ಎಂ.ರತ್ನ ಪೆಮ್ಮಯ್ಯ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಅರೆಯಡ ರತ್ನಾ ಪೆಮ್ಮಯ್ಯ, ಕಾರ್ಯದರ್ಶಿ ಚೀಯಕ್‌ಪೂವಂಡ ಅಪ್ಪಚ್ಚು, ಜಂಟಿ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ, ನಿರ್ದೇಶಕರುಗಳಾದ ಬೊಳ್ಳಜೆಟ್ಟೀರ ಎಂ. ಸುರೇಶ್, ಅರೆಯಡ ಅಶೋಕ್, ಚೇನಂಡ ಸುರೇಶ್ ನಾಣಯ್ಯ, ಮತ್ತು ವ್ಯವಸ್ಥಾಪಕ ಮಣಿ ಉಪಸ್ಥಿತರಿದ್ದರು.

-ವರದಿ: ದುಗ್ಗಳ ಸದಾನಂದ.