ಸೋಮವಾರಪೇಟೆ, ಅ. ೨೦: ಕಳೆದ ನಾಲ್ಕು ತಿಂಗಳ ಹಿಂದೆ ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟದ ತಳಭಾಗದಲ್ಲಿ ಯುವಕನೋರ್ವನ ಮೃತದೇಹ ಕಂಡುಬAದಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಕಳೆದ ಜೂನ್ ೨೧ರಿಂದ ಕಿರಗಂದೂರು ಮಕ್ಕಳಗುಡಿ ಬೆಟ್ಟ ಸಮೀಪದ ನಿವಾಸಿ ಕೂಲಿ ಕಾರ್ಮಿಕ ಕುಮಾರ (೩೦) ಎಂಬಾತ ನಾಪತ್ತೆಯಾಗಿದ್ದು, ಜುಲೈ ೧ ರಂದು ಈತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮಕ್ಕಳ ಗುಡಿ ಬೆಟ್ಟದ ತಳಭಾಗದಲ್ಲಿರುವ ರೋಷನ್ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕಂಡುಬAದಿತ್ತು. ಮೇಲ್ನೋಟಕ್ಕೆ ಇದೊಂದು ಕೊಲೆ ಎಂದು ಕಂಡುಬAದಿದ್ದರೂ ತಕ್ಷಣದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ.
ಇದೀಗ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಲಭ್ಯವಾಗಿದ್ದು, ಇದರಲ್ಲಿ ಕೊಲೆ ಎಂಬ ಅಭಿಪ್ರಾಯ ಮೂಡಿದೆ. ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಸೋಮವಾರಪೇಟೆ ಪೊಲೀಸರು ಹೆಚ್ಚಿನ ತನಿಖೆ ನಡೆಸಿ, ಸ್ಥಳೀಯ ಮೂವರನ್ನು ವಶಕ್ಕೆ ಪಡೆದು, ಭಾರತೀಯ ದಂಡ ಸಂಹಿತೆ ೩೦೪(೨) (ಉದ್ದೇಶವಲ್ಲದ ಕೊಲೆ)ರಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಕುಮಾರನನ್ನು ಹತ್ಯೆ ಮಾಡಿದ ಆರೋಪದ ಮೇರೆ ಆತನ ಸ್ನೇಹಿತರಾದ ಕಿರಗಂದೂರು ಗ್ರಾಮದ ಕೆ.ಕೆ. ರವಿಕುಮಾರ್ (೩೧), ಡಿ.ಎಸ್. ದೇವರಾಜು (೫೯) ಮತ್ತು ಬಿಳಿಗೇರಿ ಗ್ರಾಮದ ಗಿರೀಶ್ (೩೮) ಅವರುಗಳನ್ನು ಬಂಧಿಸಿದ್ದಾರೆ.
ಕೂಲಿ ಕಾರ್ಮಿಕನಾಗಿದ್ದ ಕುಮಾರ ಅವಿವಾಹಿತನಾಗಿದ್ದು, ತನ್ನ ಸಂಬAಧಿಯಾಗಿರುವ ಮಕ್ಕಳಗುಡಿ ಬೆಟ್ಟ ಸಮೀಪದ ನಿವಾಸಿ ಗಂಗಮ್ಮ ಅವರ ಮನೆಯಲ್ಲಿ ನೆಲೆಸಿದ್ದ. ಸುತ್ತಮುತ್ತಲ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈತ ಜೂನ್ ೨೧ ರಂದು ಎಂದಿನAತೆ ಕೆಲಸಕ್ಕೆಂದು ಮನೆಯಿಂದ ತೆರಳಿದವನು, ತನ್ನ ಸೇಹಿತರಾದ ರವಿಕುಮಾರ್, ದೇವರಾಜು, ಗಿರೀಶ್ ಅವರುಗಳೊಂದಿಗೆ ಮಕ್ಕಳಗುಡಿ ಬೆಟ್ಟದ ಮೇಲೆ ಮೋಜುಮಸ್ತಿಯಲ್ಲಿ ತೊಡಗಿದ್ದ.
ಇದೇ ದಿನ ನಾಪತ್ತೆಯಾಗಿದ್ದ ಕುಮಾರ ನಂತರ ಜುಲೈ ೧ ರಂದು ಬೆಟ್ಟದ ತಳಭಾಗದಲ್ಲಿರುವ ರೋಷನ್ ಅವರ ಕಾಫಿ ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ಬಗ್ಗೆ ಸಂಬAಧಿ ಗಂಗಮ್ಮ ಅವರು ದೂರು ನೀಡಿದ್ದು, ಅನುಮಾನಾಸ್ಪದ ಪ್ರಕರಣ ದಾಖಲಾಗಿತ್ತು.
ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಕುಮಾರ ಮದ್ಯಪಾನ ಮಾಡಿರುವುದು ಹಾಗೂ ತಲೆ ಭಾಗದಲ್ಲಿ ಗಾಯವಾಗಿರುವ ಬಗ್ಗೆ ಉಲ್ಲೇಖವಾಗಿದ್ದು, ಅಂದು ಆತನೊಂದಿಗೆ ಪಾರ್ಟಿ ಮಾಡಿದ್ದ ಮೂವರನ್ನು ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ರಮೇಶ್‌ಕುಮಾರ್ ಅವರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಸತ್ಯಾಂಶ ಬೆಳಕಿಗೆ ಬಂದಿದೆ.
ಅAದು ಏನಾಯ್ತು?: ಜೂನ್ ೨೧ ರಂದು ಮಕ್ಕಳಗುಡಿ ಬೆಟ್ಟದ ಮೇಲೆ ನಾಲ್ವರು ಮೋಜು ಮಸ್ತಿ ನಡೆಸಿದ್ದಾರೆ. ಈ ಸಂದರ್ಭ ರವಿಕುಮಾರ್ ಮತ್ತು ದೇವರಾಜು ಅವರುಗಳು ಕುಮಾರನನ್ನು ಬೆಟ್ಟದ ಮೇಲ್ಭಾಗವಿರುವ ಕಲ್ಲುಬಂಡೆಯ ಮೇಲೆ ಎತ್ತಿ ಹಾಕಿ ಪಲ್ಟಿ ಹೊಡೆಸಿದ್ದಾರೆ. ಇದೇ ಸಂದರ್ಭ ಕುಡಿದ ಅಮಲಿನಲ್ಲಿ ಗಿರೀಶ್ ಎಂಬಾತ ಕುಮಾರನ ಕಪಾಳಕ್ಕೆ ಹೊಡೆದಿದ್ದಾನೆ. ಹೀಗಾಗಿ ಕುಮಾರ ಸಾವನ್ನಪ್ಪಿದ್ದಾನೆ. ನಂತರ ಏನೂ ತಿಳಿಯದಂತೆ ತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆ.
ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಅಂಶಗಳು ತಿಳಿಯಬೇಕಿರುವ ಹಿನ್ನೆಲೆ ತನಿಖೆ ಪ್ರಗತಿಯಲ್ಲಿದೆ. ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.