ವೀರಾಜಪೇಟೆ, ಅ. ೨೦: ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರ ಮೂಲಕ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಮಕ್ಕಳು ಹಾಗೂ ಗರ್ಭಿಣಿಯರು ಪಡೆದುಕೊಳ್ಳಬೇಕು. ಹುಟ್ಟುವ ಮಕ್ಕಳು ಬೇರೆ ಬೇರೆ ನ್ಯೂನತೆಗಳಿಗೆ ಒಳಪಡಬಾರದು ಎಂಬ ದೃಷ್ಟಿಯಿಂದ ಸರ್ಕಾರ ಇಂತಹ ಯೋಜನೆಗಳನ್ನು ರೂಪಿಸಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.
ಗಾಂಧಿನಗರ ವಾರ್ಡ್ನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ರೂ. ೧೬ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಕೊರೊನಾ ನಂತರ ಸರ್ಕಾರ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಪೋಷಣಾ ಕಿಟ್ ವಿತರಣೆ ನಿಲ್ಲಿಸಲಾಗಿತ್ತು. ನಮ್ಮದು ಮಲೆನಾಡು ಪ್ರದೇಶವಾದ ಕಾರಣ ಬಾಣಂತಿಯರು ಮತ್ತು ಗರ್ಭಿಣಿಯರು ಹೊರಗಡೆ ತೆರಳಲು ಸಾಧ್ಯವಿಲ್ಲ. ಅವರುಗಳಿಗೆ ಅಂಗನವಾಡಿಗಳ ಮೂಲಕ ಕಿಟ್ಗಳನ್ನು ವಿತರಿಸಬೇಕು ಎಂದು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಭಾಧ್ಯಕ್ಷರು ಕೂಡ ಧ್ವನಿಗೂಡಿಸಿದರು. ಅದರ ಫಲವಾಗಿ ಕರ್ನಾಟಕದ ೭ ಜಿಲ್ಲೆಗಳಿಗೆ ಪೋಷಣ ಕಿಟ್ಗಳನ್ನು ನೀಡಲು ಒಪ್ಪಿಗೆ ನೀಡಿತು ಎಂದು ಸ್ಮರಿಸಿದರು.
ಆರೋಗ್ಯದ ಸಮಸ್ಯೆ ಉಂಟಾಗ ಬಾರದು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ಯೋಜನೆಯಾದ ‘ನಮ್ಮ ಕ್ಲಿನಿಕ್’ ಯೋಜನೆ ವೀರಾಜಪೇಟೆ ಮೊಗರಗಲ್ಲಿಯಲ್ಲಿ ಪ್ರಾರಂಭವಾಗುತ್ತಿದ್ದು ಜಿಲ್ಲೆಯಲ್ಲಿಯೆ ಪ್ರಥಮವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡುಬಡವರ ಬಗ್ಗೆ ಉತ್ತಮ ಕಾಳಜಿ ಹೊಂದಿದ್ದು ಅಂಗವಾಡಿಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಉಪಯೋಗ ವಾಗುವ ನಿಟ್ಟಿನಲ್ಲಿ ಉತ್ತಮ ಯೋಜನೆಗಳನ್ನು ಕೈಗೊಂಡಿದೆ ಎಂದರು. ಈ ಸಂದರ್ಭ ಗರ್ಭಿಣಿ ಯರಿಗೆ ಪೋಷಣ ಕಿಟ್ಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ವಾರ್ಡ್ ಸದಸ್ಯೆ ಜೂನಾ ಸುನಿತಾ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ದೇಚಮ್ಮ ಕಾಳಪ್ಪ, ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭೆ ಸದಸ್ಯರಾದ ಮನೆಯಪಂಡ ದೇಚಮ್ಮ, ಸಿ.ಕೆ. ಪೃಥ್ವಿನಾಥ್, ರಜನಿಕಾಂತ್, ಎಸ್. ಹೆಚ್. ಮತೀನ್, ಮಹಮ್ಮದ್ ರಾಫಿ, ಅಗಸ್ಟಿನ್ ಬೆನ್ನಿ, ಮಹದೇವ್, ಸುನಿತಾ, ತಸ್ಲಿಂ ಅಕ್ತರ್, ಆಶಾ ಸುಬ್ಬಯ್ಯ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ರಾಜೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಸರ್ಕಾರದ ಅಮೃತ ನಿರ್ಮಲ ನಗರ ಯೋಜನೆಯಡಿಯಲ್ಲಿ ರೂ. ೧ ಕೋಟಿ ಅನುದಾನದಲ್ಲಿ ರೂ. ೨೪.೫೦ ಲಕ್ಷ ವೆಚ್ಚದಲ್ಲಿ ಸಕ್ಕಿಂಕ್ ವಾಹನ ಹಾಗೂ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ರೂ. ೨೮.೮೯ ಲಕ್ಷ ವೆಚ್ಚದಲ್ಲಿ ೨ ಕ್ಯೂಬಿಕ್ ಮೀಟರ್ ಸಾಮರ್ಥ್ಯದ ೪ ಟಾಟಾ ಏಸ್ ವಾಹನಗಳಿಗೆ ಚಾಲನೆ ನೀಡಲಾಯಿತು.