ನಾಪೋಕ್ಲು, ಅ. ೧೯: ನಾಪೋಕ್ಲು ಪಟ್ಟಣದ ಹಿದಾಯತುಲ್ ಇಸ್ಲಾಂ ಅರೆಬಿಕ್ ಮದರಸದಲ್ಲಿ ವ್ಯಾಸಂಗ ಮಾಡುತ್ತಿರುವ ಬೇತು ಗ್ರಾಮದ ೧೦ ವರ್ಷದ ಬಾಲಕಿ ಮದರಸದಿಂದ ತನ್ನ ಮನೆಗೆ ಹಿಂದಿರುಗುವ ಸಂದರ್ಭ ನಾಪೋಕ್ಲು ಪಟ್ಟಣದಲ್ಲಿ ಬೀದಿ ನಾಯಿ ಕಚ್ಚಿ ಬಾಲಕಿಯ ಕೈಬೆರಳನ್ನು ಗಾಯಗೊಳಿಸಿದೆ. ಸ್ಥಳೀಯರು ಕೂಡಲೇ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಬಾಲಕಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಮಿತಿ ಮೀರಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಬೀದಿ ನಾಯಿಗಳ ಹಾವಳಿ ತಡೆಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.