ಕೂಡಿಗೆ, ಅ. ೧೯: ನಂಜರಾಯ ಪಟ್ಟಣ ಗ್ರಾ.ಪಂ. ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆ ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಅರಣ್ಯ ಕಾಯ್ದೆ, ಅರಣ್ಯ ಹಕ್ಕು ಸಮಿತಿ ರಚನೆ, ಕಾರ್ಯವೈಖರಿ, ವ್ಯಾಪ್ತಿ, ಅಗತ್ಯ ದಾಖಲೆಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಕೃಷ್ಣ ರೈ ಸಭೆಗೆ ಸಂಪೂರ್ಣ ವಾದ ಮಾಹಿತಿ ಒದಗಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಗ್ರಾ.ಪಂ. ವ್ಯಾಪ್ತಿಯ ನಂಜರಾಯಪಟ್ಟಣ, ಹೊಸಪಟ್ಟಣ, ವಿರೂಪಾಕ್ಷಪುರ ಗ್ರಾಮಗಳಿಗೆ ಪ್ರತ್ಯೇಕವಾಗಿ ಅರಣ್ಯ ಹಕ್ಕು ಸಮಿತಿ ರಚನೆಯಾಗಬೇಕು. ಸಮಿತಿಗಳ ಮೂಲಕ ತ್ವರಿತವಾಗಿ ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿ ಸಂಬAಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಅರ್ಜಿಯೊಂದಿಗೆ ಮನವಿ ಸಲ್ಲಿಸುವಂತಾಗಬೇಕು. ಅದರ ಮೂಲಕ ಹಕ್ಕು ಪತ್ರಗಳನ್ನು ನೀಡಲಾ ಗುವುದು, ಅಧಿಕಾರಿಗಳು ಕೂಡ ಬಡವರ ಬೇಡಿಕೆಗಳಿಗೆ ಅಗತ್ಯ ಸಹಕಾರ ಒದಗಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ, ಉಪಾಧ್ಯಕ್ಷೆ ಸಮೀರ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷರು, ಗ್ರಾಪಂ ಸದಸ್ಯ ಆರ್.ಕೆ.ಚಂದ್ರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಪ್ಪ, ಆರ್‌ಎಫ್‌ಒ ಶಿವರಾಂ, ಪಿಡಿಒ ರಾಕೇಶ್, ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾ.ಪಂ. ಸದಸ್ಯರಾದ ಲೋಕನಾಥ್, ರಕ್ಷಿತ್, ಜಾಜಿ, ರೇಖಾ, ಅರಣ್ಯ ಇಲಾಖೆಯ ಸುಬ್ರಾಯ, ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಗ್ರಾಪಂ ಮಾಜಿ ಸದಸ್ಯ ಸುಮೇಶ್ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.

ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ವಾಸವಿರುವ ೧೦೦ಕ್ಕೂ ಅಧಿಕ ಫಲಾನುಭವಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.