ಕಣಿವೆ, ಅ. ೧೯: ಕುಶಾಲನಗರ ಪಟ್ಟಣದಲ್ಲಿ ಹಾಲಿ ಇರುವ ಕುಡಿಯುವ ನೀರಿನ ಯೋಜನಾ ಘಟಕ ಹಳೆಯದಾಗಿದ್ದು, ಪ್ರಸ್ತುತ ಇರುವ ಕುಶಾಲನಗರದ ಜನಸಂಖ್ಯೆಗೆ ಸಮರ್ಪಕವಾದ ಕುಡಿಯುವ ನೀರನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ೧೪೮ ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸುವ ಸಂಬAಧ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ತಿಮ್ಮಪ್ಪ ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ಕೋರಿದರು.

ಪಂಚಾಯಿತಿ ಅಧ್ಯಕ್ಷ ಜಯವರ್ಧನ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಳೆದ ೨೦೦೧ ರಲ್ಲಿ ಮುಂದಿನ ೨೫ ವರ್ಷಗಳ ಅವಧಿಗೆ ಎಂದು ಜಾರಿ ಮಾಡಲಾಗಿದ್ದ ಕುಡಿಯುವ ನೀರಿನ ಯೋಜನೆ ಇದೀಗ ಅವಧಿ ಮುಗಿದ ಕಾರಣ ಈಗ ಇರುವ ಜನಸಂಖ್ಯೆಗೆ ಕುಡಿವ ನೀರು ಪೂರೈಸಲು ಸಾಧ್ಯವಾಗದ ಕಾರಣ ಮುಂದಿನ ೩೦ ವರ್ಷಗಳ ಅವಧಿಗೆ ೧೪೮ ಕೋಟಿ ರೂಗಳ ಹಾರಂಗಿ ಜಲಾಶಯದ ನೀರು ತಂದು ಕುಶಾಲನಗರ ಪಟ್ಟಣಕ್ಕೆ ಪೂರೈಸುವ ಚಿಂತನೆ ಹೊಂದಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರ ತಿಮ್ಮಪ್ಪ ಮಾಹಿತಿ ನೀಡಿದರು.

ಕುಶಾಲನಗರದಲ್ಲಿ ಈಗ ದಿನವೊಂದಕ್ಕೆ ೨೫ ರಿಂದ ೨೮ ಲಕ್ಷ ಲೀಟರ್ ನೀರನ್ನು ಕಾವೇರಿ ನದಿಯಿಂದ ಪೂರೈಸಲಾಗುತ್ತಿದೆ. ಭವಿಷ್ಯದಲ್ಲಿ ಕುಶಾಲನಗರದ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಪ್ರತಿನಿತ್ಯ ೪೦ ರಿಂದ ೪೫ ಲಕ್ಷ ಲೀಟರ್ ನೀರು ಪೂರೈಸಬೇಕಿರುವ ಕಾರಣ ಬೇಸಿಗೆಯಲ್ಲಿ ಬತ್ತುವ ಕಾವೇರಿ ನದಿಯ ನೀರನ್ನು ಅವಲಂಬಿಸದೇ ಹಾರಂಗಿ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಕುಶಾಲನಗರಕ್ಕೆ ಪೂರೈಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬAಧ ಸಾಮಾನ್ಯ ಸಭೆಯ ಗಮನಕ್ಕೆ ತಂದರು.

ಹಾರAಗಿಯಿAದ ಕುಶಾಲನಗರಕ್ಕೆ ನೀರನ್ನು ‘ಡಂಪ್’ ಮಾಡುವುದು. ಬಳಿಕ ಜಲಮಂಡಳಿ ಜಾಗದಲ್ಲಿ ಹತ್ತು ಲಕ್ಷ ಸಾಮರ್ಥ್ಯದ ಒಂದು ಟ್ಯಾಂಕ್, ಬಸವೇಶ್ವರ ಬಡಾವಣೆಯ ಎತ್ತರದ ಜಾಗದಲ್ಲಿ ಉಳಿದ ಎರಡು ಟ್ಯಾಂಕುಗಳನ್ನು ನಿರ್ಮಿಸಬೇಕಿರುವ ಕಾರಣ ಅಗತ್ಯವಿರುವ ೩೦x೩೦ ಮೀಟರ್ ಸುತ್ತಳತೆಯ ಜಾಗದ ಅಗತ್ಯತೆ ಜಲಮಂಡಳಿಗೆ ಬೇಕಿರುವ ಕುರಿತು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಹಿಂದೆ ರೂ ೧೩೦ ಕೋಟಿಗಳಿಗೆ ಸಿದ್ಧಗೊಂಡಿದ್ದ ನೀರು ಪೂರೈಸುವ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಸದಸ್ಯ ಕೆ.ಜಿ.ಮನು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆ ಕಡೆಯಿಂದ ಕ್ರಿಯಾಯೋಜನೆ ಸಿದ್ಧಗೊಂಡು ನಗರಾಭಿವೃದ್ಧಿ ಕೋಶಕ್ಕೆ ಹೋಗಿತ್ತು. ಅಲ್ಲಿಂದ ಸರ್ಕಾರದ ಹಣಕಾಸು ಇಲಾಖೆಗೆ ಹಾಗೂ ಸರ್ಕಾರದ ಹಂತಕ್ಕೆ ತಂದು ಯೋಜನೆ ಅನುಷ್ಠಾನಗೊಳಿಸಬೇಕಾದವರು ಯಾರು? ಎಂಬ ಪ್ರಶ್ನೆಗಳು ಕೆಲವು ಸದಸ್ಯರಿಂದ ಕೇಳಿಬಂದವು.

ಕುಶಾಲನಗರದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಯುಜಿಡಿ ಕಾಮಗಾರಿ ಪೂರ್ಣಗೊಳಿಸುವ

(ಮೊದಲ ಪುಟದಿಂದ) ಸಂಬAಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಪ್ರತ್ಯೇಕ ಸಭೆಯನ್ನು ಕರೆದು ಚರ್ಚಿಸಲು ಸಭೆ ತೀರ್ಮಾನಿಸಿತು.

ಮಡಿಕೇರಿಯ ನಗರಸಭಾ ಸದಸ್ಯ ಹಾಗೂ ಉದ್ಯಮಿ ನಡುವಿನ ಮೊಬೈಲ್ ಸಂಭಾಷಣೆ ವಿಚಾರವನ್ನು ಬಿಜೆಪಿ ಸದಸ್ಯ ಬಿ.ಅಮೃತರಾಜು ಸಭೆಯಲ್ಲಿ ಪ್ರಸ್ತಾಪಿಸಿ, ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಂಡು ಇವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆAದು ಒತ್ತಾಯಿಸಿದರು.

ಈ ಸಂದರ್ಭ ಅಮೃತರಾಜು ವಾದಕ್ಕೆ ಕಾಂಗ್ರೆಸ್ ಸದಸ್ಯರಾದ ಪ್ರಮೋದ್, ಖಲೀಮುಲ್ಲಾ, ಜೆಡಿಎಸ್ ಸದಸ್ಯ ವಿ.ಎಸ್. ಆನಂದಕುಮಾರ್ ಪ್ರತಿರೋಧ ವ್ಯಕ್ತಪಡಿಸಿದರು.

ರಸ್ತೆಗಳಲ್ಲಿ ಗುಂಡಿಗಳು

ಕುಶಾಲನಗರದ ಬಹುತೇಕ ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಗುಂಡಿಗಳಿAದ ಜನ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕೂಡಲೇ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಿ ಎಂದು ಕಾಂಗ್ರೆಸ್ ಸದಸ್ಯೆ ಜಯಲಕ್ಷಿö್ಮ ಒತ್ತಾಯಿಸಿದರು.

ಕುಶಾಲನಗರ ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಕಿರಿ ಕಿರಿಯಾಗುತ್ತಿದೆ. ಬೀಡಾಡಿ ದನಗಳನ್ನು ಹಿಡಿದು ದೊಡ್ಡಿಗೆ ಸಾಗಿಸಬೇಕು ಎಂದು ಸಭೆಯಲ್ಲಿ ಸದಸ್ಯ ತಿಮ್ಮಪ್ಪ ಪ್ರಸ್ತಾಪಿಸಿದಾಗ, ನಾಮನಿರ್ದೇಶಿತ ಸದಸ್ಯ ಶಂಭುಲಿAಗಪ್ಪ ಬೀಡಾಡಿ ದನಗಳನ್ನು ಯಾವ ದೊಡ್ಡಿಗೂ ಸಾಗಿಸೋದು ಬೇಡ. ಪಂಚಾಯಿತಿ ವತಿಯಿಂದ ಎರಡು ಎಕರೆ ಪೈಸಾರಿ ಜಾಗ ಮಂಜೂರಾತಿ ಪಡೆದು ಗೋಶಾಲೆ ನಿರ್ಮಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯಾಭಾನು, ಸದಸ್ಯರಾದ ರೇಣುಕಾ, ಶೈಲಾ, ರೂಪ, ಜಗದೀಶ್, ಎಂ.ಬಿ.ಸುರೇಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪಂಚಾಯಿತಿ ಇಂಜಿನಿಯರ್ ರಂಗರಾಮು ಇದ್ದರು.

-ಕೆ.ಎಸ್. ಮೂರ್ತಿ