೫ಜಿ ಸೇವೆ ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ: ಪ್ರಧಾನಿ
ಗುಜರಾತ್, ಅ. ೧೯: ದೇಶದಲ್ಲಿ ಆರಂಭಿಸಲಾಗಿರುವ ೫ಜಿ ಟೆಲಿಕಾಂ ಸೇವೆಯು ದೇಶದ ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರ ಜಿಲ್ಲೆಯ ಅದಾಲಾಜ್ ಪಟ್ಟಣದಲ್ಲಿ ಗುಜರಾತ್ ಸರ್ಕಾರದ ‘ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್' ಉಪಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಇಂಗ್ಲಿಷ್ ಜ್ಞಾನವನ್ನು ಬೌದ್ಧಿಕ ಅಸ್ತಿತ್ವದ ಸಂಕೇತವೆAದು ಪರಿಗಣಿಸಲಾಗಿದೆ. ಆದರೆ ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ ಎಂದರು. ೫ಜಿ ಸೇವೆಯು ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು ಮತ್ತು ಸ್ಮಾರ್ಟ್ ಕಲಿಕೆಯನ್ನು ಮೀರಿ ಹೋಗಲಿದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಮೋದಿ ಹೇಳಿದರು. ಇಂಗ್ಲಿಷ್ ಭಾಷೆಯು ಸಂವಹನದ ಏಕೈಕ ಮಾಧ್ಯಮವಾಗಿದ್ದರೂ ಇಂಗ್ಲಿಷ್ ಜ್ಞಾನವನ್ನು ಬೌದ್ಧಿಕತೆಯ ಸಂಕೇತವೆAದು ಪರಿಗಣಿಸಲಾಗಿದೆ. ಇಂಗ್ಲಿಷ್‌ನಿAದ ಅನಾನುಕೂಲವಾಗಿರುವ ಜನರು ಹಿಂದುಳಿದಿಲ್ಲ ಎಂದು ಸ್ಥಳೀಯ ಭಾಷೆಗಳ ಬಳಕೆಯನ್ನು ಅವರು ಪ್ರತಿಪಾದಿಸಿದರು. ಹಳ್ಳಿಗಳ ಅನೇಕ ಯುವ ಪ್ರತಿಭೆಗಳು ಇಂಗ್ಲಿಷ್ ಭಾಷೆಯ ತೊಡಕಿನಿಂದಾಗಿ ವೈದ್ಯರು ಮತ್ತು ಇಂಜಿನಿಯರ್ ಆಗಲು ಸಾಧ್ಯವಾಗಿಲ್ಲ ಎಂದರು. ಹೊಸ ಶಿಕ್ಷಣ ನೀತಿಯು (ಎನ್‌ಇಪಿ) ದೇಶವನ್ನು ಇಂಗ್ಲಿಷ್ ಭಾಷೆಯನ್ನು ಸುತ್ತುವರೆದಿರುವ 'ಗುಲಾಮ ಮನಸ್ಥಿತಿ'ಯಿಂದ ಹೊರತರಲಿದೆ ಎಂದರು.
ಕೆಎಸ್‌ಆರ್‌ಟಿಸಿ ನೌಕರರಿಗೆ ಅಪಘಾತ ವಿಮೆ ಜಾರಿ
ಬೆಂಗಳೂರು, ಅ. ೧೯: ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಸಿಬ್ಬಂದಿಗೆ ರೂ. ೫೦ ಲಕ್ಷ ಅಪಘಾತ ವಿಮೆ ಯೋಜನೆ ಜಾರಿ ಮಾಡಿದೆ. ಈ ಅಪಘಾತ ವಿಮಾ ಯೋಜನೆಗೆ ಸಂಬAಧಿಸಿದAತೆ ಕೆಎಸ್ ಆರ್‌ಟಿಸಿ, ಎಸ್‌ಬಿಐನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚAದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಹಾಗೂ ಎಸ್‌ಬಿಐ ಡಿಜಿಎಂ ಪಂಕಜ್ ತಪ್ಲಿಯಾಲ್ ಸಹಿ ಹಾಕಿದರು. ಇದುವರೆಗೂ ನಿಗಮದ ಸಿಬ್ಬಂದಿ ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ, ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಅವರ ಅವಲಂಬಿತರಿಗಾಗಲಿ ಅಥವಾ ಅವರಿಗಾಗಲಿ ಲಭಿಸುತ್ತಿರಲಿಲ್ಲ. ಹೀಗಾಗಿ ಕೆಎಸ್‌ಆರ್‌ಟಿಸಿ ಮೊದಲ ಬಾರಿಗೆ ರೂ. ೫೦ ಲಕ್ಷ ಅಪಘಾತ ವಿಮೆ ಯೋಜನೆ ಜಾರಿ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ 'ಪ್ರೀಮಿಯಂ ರಹಿತ' ವೈಯುಕ್ತಿಕ ಅಪಘಾತ ವಿಮೆ ಜಾರಿಗೊಳಿಸಲಾಗಿದೆ. ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ. ೫೦ ಲಕ್ಷ ಪರಿಹಾರದ ಹಣ ಕೂಡಲೇ ದೊರೆಯಲಿದೆ. ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ರೂ. ೨೦ ಲಕ್ಷ ಹಾಗೂ ಭಾಗಶಃ ಅಂಗವೈಕಲ್ಯ ಉಂಟಾದಲ್ಲಿ ರೂ. ೧೦ ಲಕ್ಷ ವಿಮಾ ಪರಿಹಾರ ದೊರೆಯಲಿದೆ. ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಸಂಭವಿಸುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.
ಕೆಪಿಟಿಸಿಎಲ್ ಅಕ್ರಮ ನೇಮಕಾತಿ ಹಗರಣ: ಮತ್ತಿಬ್ಬರು ಆರೋಪಿಗಳ ಬಂಧನ
ಬೆಳಗಾವಿ, ಅ. ೧೯: ಕೆಪಿಟಿಸಿಎಲ್ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೆ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರ ಗ್ರಾಮದ ಯಲ್ಲಪ್ಪ ಮಹದೇವಪ್ಪ ರಕ್ಷಿ (೨೬), ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ನಾಗಪ್ಪ ದೊಡ್ಡಮನಿ (೨೭) ಬಂಧಿತ ಆರೋಪಿಗಳಾಗಿದ್ದು ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೨೨ಕ್ಕೆ ಏರಿಕೆಯಾಗಿದೆ. ಆರೋಪಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಮಲ್ಲಪ್ಪ ರಕ್ಷಿ ಎಲೆಕ್ಟಾçನಿಕ್ ಡಿವೈಸ್‌ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷಾ ಅಭ್ಯರ್ಥಿಗಳಿಗೆ ಕೊಟ್ಟಿದ್ದಲ್ಲದೇ, ಉತ್ತರ ಹೇಳಿದ ಆರೋಪವಿದೆ. ಆತನ ಬಳಿಯಿದ್ದ ಒಂದು ಮೊಬೈಲ್, ಕಾರು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಗೇಶ ದೊಡ್ಡಮನಿ ಎಲೆಕ್ಟಾçನಿಕ್ ಡಿವೈಸ್‌ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದ ಆರೋಪವಿದೆ. ಈ ನಡುವೆ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಸಂಜೀವ ಲಕ್ಷö್ಮಣ ಭಂಡಾರಿ ಸೇರಿದಂತೆ ೨೦ ಆರೋಪಿಗಳಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಜೆಎಂಎಫ್‌ಸಿ ಎರಡನೇ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಈ ನಡುವೆ ಸಂಜೀವ ಭಂಡಾರಿ ಜಾಮೀನು ಪಡೆದು ಕೋರ್ಟ್ನಿಂದ ಹೊರಬರುತ್ತಿದ್ದಂತೆಯೇ ಆತನನ್ನು ಇನ್ನೊಂದು ಪ್ರಕರಣದಲ್ಲಿ ಬಂಧಿಸಲಾಗಿದೆ. ಕೆಪಿಟಿಸಿಎಲ್ ಅಕ್ರಮದ ಪ್ರಮುಖ ಆರೋಪಿಯಾಗಿರುವ ಬೆಳಗಾವಿ ಮೂಲದ ಸಂಜೀವ್ ಲಕ್ಷö್ಮಣ ಭಂಡಾರಿ ಜಾಮೀನು ಸಿಕ್ಕು ಹೊರಬರುತ್ತಿದ್ದಂತೆ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಅಕ್ರಮದಲ್ಲಿ ಮತ್ತೆ ಅರೆಸ್ಟ್ ಆಗಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲು ಮುಂದೆಯೇ ಸಿಐಡಿ ಅಧಿಕಾರಿಗಳು ಆತನಿಗೆ ಬಲೆ ಹಾಕಿದ್ದಾರೆ. ಈತನ ಮೇಲೆ ೨೦೨೧ರಲ್ಲಿ ನಡೆದಿದ್ದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲೂ ಅಕ್ರಮ ಎಸಗಿರುವ ಆರೋಪವಿದೆ. ಇದೀಗ ಸಂಜೀವ ಭಂಡಾರಿಯನ್ನು ಬೆಳಗಾವಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಲಾಗಿದೆ.
ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ
ಮುಂಬೈ, ಅ. ೧೯: ರೂಪಾಯಿ ಮೌಲ್ಯ ಬುಧವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಪ್ರತಿ ಡಾಲರ್‌ಗೆ ೮೩.೦೧ ರೂಪಾಯಿಗೆ ಕುಸಿದಿದೆ. ವಿದೇಶಿ ಬಂಡವಾಳದ ಹೊರಹರಿವು ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಬಲವಾದ ಡಾಲರ್ ಎದುರು ರೂಪಾಯಿ ಮೌಲ್ಯ ಮೊದಲ ಬಾರಿಗೆ ೬೧ ಪೈಸೆ ಕುಸಿದು ೮೩ ರೂಪಾಯಿ ಗಡಿ ದಾಟಿದೆ. ಇದಲ್ಲದೆ, ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹೂಡಿಕೆದಾರರಲ್ಲಿ ಅಪಾಯ-ವಿರೋಧಿ ಮನೋಭಾವವು ಸ್ಥಳೀಯ ಕರೆನ್ಸಿಯ ಮೌಲ್ಯ ಐತಿಹಾಸಿಕ ದಾಖಲೆಯ ಕುಸಿತಕ್ಕೆ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮಂಗಳವಾರ ೮೨.೩೬ರ ಮೌಲ್ಯ ಹೊಂದಿದ್ದ ರೂಪಾಯಿ ೮೨ರ ಸನಿಹಕ್ಕೆ ಬರುವ ಆಶಾವಾದ ಮೂಡಿಸಿತ್ತು. ಆದರೆ, ಮತ್ತೆ ನಿರಾಸೆ ಮೂಡಿಸಿದೆ. ಮಂಗಳವಾರದ ವಹಿವಾಟಿನಲ್ಲೇ ರೂಪಾಯಿ ಕುಸಿಯುವ ಸುಳಿವು ಕಂಡುಬAದಿತ್ತು ಎಂದು ಮುಂಬೈ ಮೂಲದ ಬ್ಯಾಂಕ್‌ನ ಟ್ರೇಡರ್ ಒಬ್ಬರು ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಎರಡು ವರ್ಷದ ಮಗುವಿಗೆ ಬೆಂಗಳೂರಿನಲ್ಲಿ ಬೋನ್ ಮ್ಯಾರೊ ಕಸಿ
ಬೆಂಗಳೂರು, ಅ. ೧೯: ಪಾಕಿಸ್ತಾನದ ಎರಡು ವರ್ಷದ ಮಗು ಅಮೈರಾ ಸಿಕಂದರ್ ಖಾನ್‌ಗೆ ನಗರದ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ(ಬಿಎಂಟಿ)ಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕರಾಚಿಯಿಂದ ಬಂದಿರುವ ಕ್ರಿಕೆಟ್ ವೀಕ್ಷಕ ವಿವರಣೆಗಾರ ಸಿಕಂದರ್ ಬಖ್ತ್ ಅವರ ಮಗಳು ಅಮೈರಾ ಅವರು ಇತ್ತೀಚೆಗೆ ನಾರಾಯಣ ಹೆಲ್ತ್ನಲ್ಲಿ ಬಿಎಂಟಿ ಸಹಾಯದಿಂದ ಮ್ಯೂಕೋಪೊಲಿಸ್ಯಾಕರಿಡೋಸಿಸ್ ಟೈಪ್ ೧ (ಎಂಪಿಎಸ್‌ಐ)ನಿAದ ಗುಣಮುಖಳಾಗಿದ್ದಾಳೆ. "ಮ್ಯೂಕೋಪೊಲಿಸ್ಯಾಕರಿಡೋಸಿಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಕಣ್ಣುಗಳು ಮತ್ತು ಮೆದುಳು ಸೇರಿದಂತೆ ಅನೇಕ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಹೆಲ್ತ್ಕೇರ್ ಚೈನ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ದೇವಿ ಶೆಟ್ಟಿ ಬುಧವಾರ ಹೇಳಿದ್ದಾರೆ. ಅಮೈರಾ (೨.೬ ವರ್ಷ) ದಾನಿಯಾಗಿದ್ದ ತನ್ನ ತಂದೆಯ ಮೂಳೆ ಮಜ್ಜೆಯನ್ನು ಬಳಸಿ ಉಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.