ಮುಳ್ಳೂರು, ಅ. ೧೮: ಹೂಳು ತುಂಬಿದ್ದ ನಿಡ್ತ ಗ್ರಾಮದ ಪುರಾತನ ಕೆರೆಗೆ (ಕಲ್ಯಾಣಿ) ಇದೀಗ ಕಾಯಕಲ್ಪ ದೊರೆತಿದೆ.

ಕೊಡಗು ಜಿ.ಪಂ. ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಕಿರು ಜಲಮೂಲ ಪುನಶ್ಚೇತನ ಕಾರ್ಯಕ್ರಮದಡಿಯಲ್ಲಿ ಮೈಸೂರಿನ ಕ್ರೆಡಿಟ್-ಐ ಅನುಷ್ಠಾನ ಬೆಂಬಲ ಸಂಸ್ಥೆಯು ಈ ಕಾರ್ಯ ನಡೆಸಿದೆ. ನೀರು ಮತ್ತು ನೈರ್ಮಲ್ಯ, ಪರಿಸರ ಸ್ವಚ್ಛತೆಗೆ ಸಂಬAಧಿಸಿದAತೆ ಗ್ರಾಮಸ್ಥರಿಗೆ ಅರಿವು ಮೂಡಿಸುತ್ತಿರುವ ಜೊತೆಯಲ್ಲಿ ಸಂಸ್ಥೆಯು ಗ್ರಾಮಗಳಲ್ಲಿ ಹೂಳುತುಂಬಿ ಮುಚ್ಚಿ ಹೋಗಿರುವ ಪುರಾತನ ಕೆರೆ, ಕೊಳಗಳನ್ನು ಗುರುತಿಸಿ ಗ್ರಾಮಸ್ಥರ ಸಹಕಾರ ಪಡೆದುಕೊಂಡು ಶ್ರಮದಾನದ ಮೂಲಕ ಅಂತಹ ಕೆರೆ ಕೊಳಗಳನ್ನು ಹೂಳು ತೆಗೆದು ಸ್ವಚ್ಛಗೊಳಿಸಿ ಜನರು ಕೆರೆಯ ನೀರನ್ನು ಉಪಯೋಗಿಸಲು ಅನುವು ಮಾಡಿಕೊಡುತ್ತದೆ. ಅದೇ ರೀತಿಯಲ್ಲಿ ಕ್ರೇಡಿಟ್-ಐ ಸಂಸ್ಥೆಯು ಕೊಡಗಿನಲ್ಲಿ ಕಾಡು ಪೊದೆಗಳಿಂದ ಮುಚ್ಚಿ ಹೋಗಿರುವ ಕೆರೆ ಕೊಳಗಳ ಬಗ್ಗೆ ಸಮೀಕ್ಷೆ ನಡೆಸಿದೆ. ಅದರಂತೆ ನಿಡ್ತ ಗ್ರಾಮದ ಪುರಾತನ ಕೆರೆ ಹೂಳು ತುಂಬಿ ಮುಚ್ಚಿ ಹೋಗಿರುವುದನ್ನು ಗಮನಿಸಿದ ಸಂಸ್ಥೆಯ ತಂಡ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಶ್ರಮದಾನ ಮೂಲಕ ಮುಚ್ಚಿ ಹೋಗಿದ್ದ ಕೆರೆಯಲ್ಲಿ ಹೂಳು ತೆಗೆದು ಪೊದೆ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಿದ್ದಾರೆ.

ಕೆರೆ ಪುನಶ್ಚೇತನ ಶ್ರಮದಾನ ಸಂದರ್ಭ ಕ್ರೆಡಿಟ್-ಐ ಸಂಸ್ಥೆಯ ತಂಡದ ನಾಯಕ ಮತ್ತು ಸಂಯೋಜಕ ಮಂಜುನಾಥ್, ಸಂಸ್ಥೆಯ ಅಭಿಯಂತರ ಪವನ್, ಸಂಸ್ಥೆಯ ಶಿವಣ್ಣ, ಮಹೇಂದ್ರ, ನಿಡ್ತ ಗ್ರಾಮದ ಪ್ರಮುಖರಾದ ಸುಬ್ರಮಣ್ಯ, ಎನ್.ಜಿ,ಅನಿಲ್, ಬಾಬು, ಗ್ರಾ.ಪಂ. ಸದಸ್ಯ ಪುಟ್ಟಣ್ಣ, ಗ್ರಾ.ಪಂ. ಕಾರ್ಯದರ್ಶಿ ಕುಶಾಲಪ್ಪ ಇವರುಗಳ ಸಮ್ಮುಖದಲ್ಲಿ ಗ್ರಾಮಸ್ಥರು ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.