ಮಡಿಕೇರಿ, ಅ. ೧೮: ಅರಣ್ಯ ಉತ್ಪನ್ನವಾದ ಶ್ರೀಗಂಧದ ಸೊತ್ತುಗಳ ಕಳ್ಳಸಾಗಣಿಕೆಯಲ್ಲಿ ತೊಡಗಿದ್ದ ವಾಹನ ಹೀರೋ ಹೊಂಡ ಸ್ಪೆ÷್ಲಂಡರ್ ಪ್ರೋ ಬೈಕ್ ನೋಂದಣಿ ಸಂಖ್ಯೆ ಕೆಎ ೧೨ಕ್ಯೂ ೧೫೨೦ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೦/೨೦೨೨-೨೩ ದಿನಾಂಕ ೨೨-೦೮-೨೦೨೨ರಲ್ಲಿ ಅಮಾನತ್ತುಪಡಿಸಿದ್ದು, ಮಡಿಕೇರಿ ವಿಭಾಗದ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ನ್ಯಾಯಲಯದಲ್ಲಿ ವಿಚಾರಣೆಯಲ್ಲಿದೆ. ಈ ವಾಹನದ ಹಕ್ಕು ಬಾಧ್ಯತೆ ಸಲ್ಲಿಸುವ ಕುರಿತು ೩೦ ದಿನದೊಳಗೆ ಮಾಲೀಕತ್ವದ ಪೂರ್ಣ ದಾಖಲಾತಿಗಳೊಂದಿಗೆ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಲಯಕ್ಕೆ ಅಹವಾಲು ಸಲ್ಲಿಸುವುದು. ಇಲ್ಲದಿದ್ದಲ್ಲಿ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಹೆಚ್ಚಿನ ವಿವರಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ ಸಂಪರ್ಕಿಸಬಹುದು ಕೋರಿದೆ.