ಶನಿವಾರಸAತೆ, ಅ. ೧೮: ಪಟ್ಟಣದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲಿಸುತ್ತಿದ್ದ ೧೮ ಮಂದಿ ಸವಾರರಿಗೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವ ಮೂರ್ತಿ, ಹೆಡ್ ಕಾನ್ಸ್ಟೇಬಲ್ ಪ್ರದೀಪ್ ಕುಮಾರ್, ಸಿಬ್ಬಂದಿ ವಿಶ್ವನಾಥ್, ಲೋಕೇಶ್, ಕುಮಾರ್ ರೂ. ೯ ಸಾವಿರ ದಂಡ ವಿಧಿಸಿದರು.

ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಮಾತನಾಡಿ, ಶನಿವಾರಸಂತೆ-ಕೊಡ್ಲಿಪೇಟೆ ವಿಭಾಗದಲ್ಲಿ ಯಾವುದೇ ದಾಖಲಾತಿಗಳಿಲ್ಲದ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳು ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿವೆ. ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವಾಹನ ಮಾಲೀಕರನ್ನು ಎಚ್ಚರಿಸಿದರು.