ಸೋಮವಾರಪೇಟೆ, ಅ. ೧೮: ಮೈಸೂರು ವಿಶ್ವವಿದ್ಯಾಲಯ, ಹೊಳೆನರಸೀಪುರ ಪಡವಲಹಿಪ್ಪೆ ಹೆಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ಅಧ್ಯಯನ ವಿಭಾಗ, ಕೊಡಗು ‘ನಾವು’ ಪ್ರತಿಷ್ಠಾನ, ಸಹಯೋಗದೊಂದಿಗೆ ತಾಲೂಕಿನ ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಸಮುದಾಯ ಭವನದಲ್ಲಿ ಆಯೋಜಿಸಿರುವ ಹತ್ತು ದಿನದ ಸಮಾಜಕಾರ್ಯ ಶಿಬಿರದಲ್ಲಿ ಶಿಬಿರಾರ್ಥಿಗಳು ನೇತ್ರದಾನ ಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದರು.
ಹತ್ತು ದಿನಗಳ ಕಾಲ ಹಲವು ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಿದ್ದ ಶಿಬಿರಾರ್ಥಿಗಳು ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ನೇತ್ರದಾನ ಮಾಡಿ ಪ್ರಮಾಣ ಪತ್ರ ಪಡೆದರು. ನೇತ್ರದಾನದ ಬಗ್ಗೆ ‘ನಾವು’ ಪ್ರತಿಷ್ಠಾನ ಕೊಡಗು ಸಂಸ್ಥಾಪಕಿ ಸುಮನಾ ಮತ್ತು ಗೌತಮ್ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ ಮಾತನಾಡಿ, ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಿದ್ದ ಶಿಬಿರಾರ್ಥಿಗಳು ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ನೇತ್ರದಾನ ಮಾಡಿ ಪ್ರಮಾಣ ಪತ್ರ ಪಡೆದರು. ನೇತ್ರದಾನದ ಬಗ್ಗೆ ‘ನಾವು’ ಪ್ರತಿಷ್ಠಾನ ಕೊಡಗು ಸಂಸ್ಥಾಪಕಿ ಸುಮನಾ ಮತ್ತು ಗೌತಮ್ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಕ್ಕ ಕಲಿಕಾ ಅವಕಾಶವನ್ನು ವ್ಯರ್ಥ ಮಾಡಿಕೊಳ್ಳದೆ, ಸದ್ವಿನಿಯೋಗಪಡಿಸಿ ಕೊಳ್ಳಬೇಕೆಂದರು.
ಸಹಾಯಕ ಪ್ರಾಧ್ಯಾಪಕ ರಿಯಾಜ್ ಅಹಮ್ಮದ್, ಪ್ರಾಧ್ಯಾಪಕ ರಾದ ಸಂಜೀವ್ ಕುಮಾರ್, ದೀಪು, ದೇವಾಲಯ ಸಮಿತಿಯ ಪದಾಧಿ ಕಾರಿಗಳಾದ ವಿಜಯಕುಮಾರ್, ಗಂಗಾ, ರಮೇಶ್, ವಿಜಯ, ಸಂಜಯ್, ಪ್ರಶಾಂತ್, ದೇವರಾಜ್, ಅನಿಲ್ಕುಮಾರ್ ಗಿರೀಶ್ ಇದ್ದರು.