ಮಡಿಕೇರಿ, ಅ. ೧೮: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾರುಗುಂದ ಗ್ರಾಮದ ವಾರ್ಡ್ಸಭೆ ತಾ. ೧೯ ರಂದು (ಇಂದು) ಕಾರುಗುಂದ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯೆ ಬಾಡನ ಲಿಖಿತ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ.

ಪಾಲೂರು ಗ್ರಾಮದ ವಾರ್ಡ್ಸಭೆ ತಾ. ೧೯ ರಂದು (ಇಂದು) ಪಾಲೂರು ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯೆ ಪೊದುವಾಡ ಮೀನಾಕ್ಷಿ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೧೨ಕ್ಕೆ ನಡೆಯಲಿದೆ.

ಬೆಟ್ಟಗೇರಿ ಗ್ರಾಮದ ವಾರ್ಡ್ಸಭೆ ತಾ. ೧೯ ರಂದು (ಇಂದು) ಬೆಟ್ಟಗೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯ ಬಿ.ಎ. ಗೋಪಾಲ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೨ ಗಂಟೆಗೆ ನಡೆಯಲಿದೆ.

ಅರ್ವತ್ತೋಕ್ಲು ಗ್ರಾಮದ ವಾರ್ಡ್ಸಭೆ ತಾ. ೨೦ ರಂದು ಅರ್ವತ್ತೋಕ್ಲು ದವಸ ಭಂಡಾರದ ಕಟ್ಟಡದಲ್ಲಿ ಗ್ರಾ.ಪಂ. ಸದಸ್ಯ ದಿನೇಶ್ ಕರುಂಬಯ್ಯ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ಕ್ಕೆ ನಡೆಯಲಿದೆ.

ಹೆರವನಾಡು-೧ ಗ್ರಾಮದ ವಾರ್ಡ್ಸಭೆ ತಾ. ೨೦ ರಂದು ಗ್ರಾಮದ ಪನ್ಯ ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಸದಸ್ಯ ಎಂ.ಆರ್. ಮಣಿಕಂಠ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೧೨ಕ್ಕೆ ನಡೆಯಲಿದೆ.

ಹೆರವನಾಡು-೨ ಗ್ರಾಮದ ವಾರ್ಡ್ಸಭೆ ತಾ. ೨೦ ರಂದು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯೆ ಎಂ.ಸಿ. ಲಲಿತ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೨ ಗಂಟೆಗೆ ನಡೆಯಲಿದೆ.

ಬೆಟ್ಟಗೇರಿ ಗ್ರಾಮಸಭೆ ತಾ. ೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಟ್ಟಗೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.