ಭಾಗಮಂಡಲ, ಅ. ೧೮: ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ಮಾತೆ ನಿನ್ನೆ ರಾತ್ರಿ ತೀರ್ಥರೂಪಿಣಿಯಾಗಿ ದರುಶನ ನೀಡಿದ್ದು, ಇಂದು ಜಿಲ್ಲೆಯ ವಿವಿಧೆಡೆಗಳಿಂದ ಹೊರಭಾಗ ದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮಿಸಿದರು. ಕಳೆದ ಬಾರಿಗಿಂತ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿತ್ತು.
ನಿನ್ನೆ ರಾತ್ರಿ ಒಂದು ಗಂಟೆವರೆಗೂ ತೀರ್ಥ ವಿತರಣೆ ನಡೆಯಿತು. ಇಂದು ಬೆಳಿಗ್ಗೆ ಆರು ಗಂಟೆಯಿAದ ಪವಿತ್ರ ತೀರ್ಥ ವಿತರಣೆ ನಡೆಯಿತು. ಭಕ್ತರು ತೀರ್ಥ ಸ್ನಾನ ಮಾಡಿ ಪವಿತ್ರ ತೀರ್ಥವನ್ನು ಸ್ವೀಕರಿಸಿದರು. ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನ ಮಾಡಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ತಲಕಾವೇರಿ ಕ್ಷೇತ್ರಕ್ಕೆ ಭಕ್ತರು ಆಗಮಿಸಿದ್ದರು. ಇಂದೂ ಕೂಡ ಖಾಸಗಿ ಹಾಗೂ ಸರ್ಕಾರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಕೊಡಗು ಏಕೀಕರಣ ರಂಗದಿAದ ಭಕ್ತರಿಗೆ ಅನ್ನದಾನ ನಡೆಯುತ್ತಿದ್ದು, ಕಾವೇರಿ ಸನ್ನಿಧಿಯಲ್ಲಿ ಯಾವುದೇ ನೂಕು ನುಗ್ಗಲು ಇಲ್ಲದೆ ಸಾಂಗವಾಗಿ ಭಕ್ತರು ತೀರ್ಥ ಸ್ನಾನ ಮಾಡಿ ಪೂಜೆ ಸಲ್ಲಿಸಿದರು. ಕುಂಕುಮ ಅರ್ಚನೆ ನೆರವೇರಿಸಿ ಪೂಜೆ ಸಲ್ಲಿಸಿದರು. ೨೫ಕ್ಕೂ ಅಧಿಕ ಸ್ಥಳೀಯ ಯುವಕರು ತೀರ್ಥ ವಿತರಣೆ ಕಾರ್ಯದಲ್ಲಿ ಬೆಳಗ್ಗಿ ನಿಂದಲೇ ತೊಡಗಿಸಿಕೊಂಡಿದ್ದರು. ತೀರ್ಥ ವಿತರಣೆಯಲ್ಲಿ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಹಾಗೂ ಚೆಟ್ಟಿಮಾನಿಯ ಗೆಳಯರ ಬಳಗ ಸಂಘದ ಸದಸ್ಯರು ನಿರಂತರ ೮ ಗಂಟೆಗಳ ಕಾಲ ತೀರ್ಥ ವಿತರಣೆ ಮಾಡಿದರು.
(ಮೊದಲ ಪುಟದಿಂದ)
ತಲಕಾವೇರಿಯಲ್ಲಿ ಒಂದು ಸರ ಕಳ್ಳತನ ಪ್ರಕರಣ ನಡೆದಿದೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕೂಡ ಅನ್ನದಾನದ ವ್ಯವಸ್ಥೆಯಿತ್ತು. ಹುಂಡಿಗೆ ಕಾಣಿಕೆ ಹಣ ಹಾಕಲು ಸರ್ಕಾರದ ಆದೇಶದ ಮೇರೆಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಕ್ಯೂಆರ್ ಕೋಡ್ ಬಳಸಿ ಕಾಣಿಕೆ ಅರ್ಪಿಸಿ ನಂದಾದೀಪದೆದುರು ಪ್ರಾರ್ಥಿಸಿ ಪಡಿಯಕ್ಕಿ ಕೊಂಡೊಯ್ಯುತ್ತಿದ್ದುದು ಕಂಡುಬAತು. -ಕುಯ್ಯಮುಡಿ ಸುನಿಲ್