ನಾಪೋಕ್ಲು, ಅ. ೧೮: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವದ ಎರಡನೇ ದಿನ ಇತಿಹಾಸ ಪ್ರಸಿದ್ಧ ಬಲಮುರಿ ಅಗಸ್ತೆö್ಯÃಶ್ವರ ಹಾಗೂ ಶ್ರೀ ಕಣ್ವ ಮುನೀಶ್ವರ ದೇವಳಗಳಲ್ಲಿ ಪ್ರತೀ ವರ್ಷ ನಡೆಯುವ ಜಾತ್ರಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಕೊರೊನಾ ನಿರ್ಬಂಧ ಬಳಿಕ ಈ ವರ್ಷ ಹಬ್ಬ ಮತ್ತಷ್ಟು ಕಳೆಗಟ್ಟಿತ್ತು.

ತುಲಾ ಸಂಕ್ರಮಣದ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ನೆರವೇರಿತು. ಭಕ್ತಾದಿಗಳು ಶ್ರೀ ಕಾವೇರಿ ತೀರ್ಥಸ್ನಾನ ಮತ್ತು ಪಿಂಡ ಪ್ರದಾನ ಮಾಡಿದರು.

ಕಾವೇರಿ ನದಿ ತೀರದ ಎಡಭಾಗದಲ್ಲಿರುವ ಶ್ರೀ ಕಣ್ವ ಮುನೀಶ್ವರ ದೇವಳದಲ್ಲಿ ಬೆಳಿಗ್ಗೆಯಿಂದ ರುದ್ರಾಭಿಷೇಕ, ಸಾಮೂಹಿಕ ಸತ್ಯನಾರಾಯಣಪೂಜೆ, ಮಹಾಪೂಜೆ, ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡರು. ನಂತರ ಅಗಸ್ತೆö್ಯÃಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಅಗಸ್ತೆö್ಯÃಶ್ವರ ದೇವಳದಲ್ಲಿ ಬೆಳಿಗ್ಗೆ ೫ ಗಂಟೆಯಿAದಲೇ ಕೇಶಮುಂಡನ ಸೇವೆ, ಪಿಂಡ ಪ್ರದಾನ ಆರಂಭಗೊAಡಿತು. ನಂತರ ದೇವಳದ ವತಿಯಿಂದ ಕಾವೇರಿ ನದಿ ತೀರದಲ್ಲಿ ಗಂಗಾ ಪೂಜೆ ಹಾಗೂ ಶ್ರೀ ಕಾವೇರಿ ಮಾತೆಗೆ ಮಹಾ ಆರತಿ ನೆರವೇರಿಸಲಾಯಿತು. ದೇವಳದಲ್ಲಿ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಅಗಸ್ತೆö್ಯÃಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರAಡ ಸಾದು ತಮ್ಮಯ್ಯ ಹಾಗೂ

(ಮೊದಲ ಪುಟದಿಂದ) ತಕ್ಕಮುಖ್ಯಸ್ಥರು ಹಾಜರಿದ್ದರು. ಪೂಜಾ ವಿಧಿ ವಿಧಾನಗಳ ನೇತೃತ್ವವನ್ನು ಮಹಾಬಲ್ಲೇಶ್ವರ ಭಟ್ ಹಾಗೂ ಅವರ ತಂಡ ನೆರವೇರಿಸಿತು.

ಶ್ರೀ ಕಣ್ವ ಮುನೀಶ್ವರ ದೇವಳದಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಉತ್ತಪ್ಪ, ತಕ್ಕಮುಖ್ಯಸ್ಥರು, ಉಪಸ್ಥಿತರಿದ್ದರು. ಪೂಜಾ ವಿಧಿ ವಿಧಾನಗಳನ್ನು ಅರ್ಚಕ ರವಿ ಭಟ್ ಮತ್ತು ತಂಡ ನೆರವೇರಿಸಿತು.

ಬಲಮುರಿ, ಮೂರ್ನಾಡು, ಪಾರಾಣೆ, ಕೈಕಾಡು, ಬೇತ್ರಿ, ಹೊದ್ದೂರು, ನಾಪೋಕ್ಲು, ಕೊಂಡAಗೇರಿ ಸುತ್ತಮುತ್ತಲು ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡುವದು, ಕಾವೇರಿ ನದಿ ತೀರದಲ್ಲಿ ಕೇಶ ಮುಂಡನ, ಪೂರ್ವಿಕರಿಗೆ ಪಿಂಡ ಪ್ರದಾನ ಮಾಡುವ ಪದ್ಧತಿ ಹಿಂದಿನಿAದಲೂ ನಡೆದುಕೊಂಡು ಬಂದಿದೆ.

-ಪಿ.ವಿ.ಪ್ರಭಾಕರ್