ಮಡಿಕೇರಿ, ಅ.೧೭: ತಿತಿಮತಿ ಸಮೀಪದ ಭದ್ರಗೊಳ ಗ್ರಾಮದಲ್ಲಿ ತಾ. ೭ರಂದು ಶವವಾಗಿ ಪತ್ತೆಯಾಗಿದ್ದ ಮೂಡಗದ್ದೆ ಯಶ್ವಂತ್ ಕುಮಾರ್ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿತ ಮೂಡಗದ್ದೆ ಕಿರಣ್ ಚಿನ್ನಪ್ಪ ಯಾವುದೇ ತಪ್ಪು ಮಾಡಿರುವುದಿಲ್ಲ. ಈ ಪ್ರಕರಣದಲ್ಲಿ ಅವರು ನಿರಪರಾಧಿಯಾಗಿದ್ದಾರೆ ಎಂದು ಕಿರಣ್ ಪತ್ನಿ ಮೂಡಗದ್ದೆ ಟೈಸಿನ್(ಶಮ್ಮಿ) ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಮಡಿಕೇರಿಗೆ ತೆರಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವ ಅವರು, ಪ್ರಕರಣದಲ್ಲಿ ಪತಿ ಕಿರಣ್ ಚಿನ್ನಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ. ಇದರ ಹಿಂದೆ ದಾಯಾದಿಗಳ ಬಹುದೊಡ್ಡ ಜಾಲ ಕಾರ್ಯನಿರ್ವಹಿಸಿದ್ದು, ಪತಿಯನ್ನು ಬಲಿಪಶು ಮಾಡಲಾಗಿದೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯನ್ನು ತಿಳಿಯಲು ಮೃತ ಯಶ್ವಂತ್ ಕುಮಾರ್ನ ಪತ್ನಿ ಮಲ್ಲಿಕಾಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಟೈಸಿನ್ ಅವರು ಎಸ್ಪಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.
ತಾ. ೩ರಂದು ರಾತ್ರಿ ಮೂಡಗದ್ದೆ ಯಶ್ವಂತ್ ಪಾನಮತ್ತನಾಗಿ ನಮ್ಮ ಮನೆಯ ಬಳಿ ಬಂದು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದನ್ನು ಕೇಳಿ ಮಲಗಿದ್ದ ನನ್ನ ಪತಿ ಹೊರಬಂದು ನಮ್ಮ ಮನೆಯ ಆವರಣದೊಳಗಡೆ ನಿಂತು ಏಕೆ ಅನಗತ್ಯವಾಗಿ ಬೈಯ್ಯುತ್ತಿರುವೆ ಎಂದಷ್ಟೇ ಕೇಳಿದ್ದರು. ಈ ಸಂದರ್ಭದಲ್ಲಿ ಯಶ್ವಂತನ ಪತ್ನಿ ಮಲ್ಲಿಕಾ, ತನ್ನ ಗಂಡ ಪಾನಮತ್ತನಾಗಿದ್ದು ಆತನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರು. ನಂತರ ಯಶ್ವಂತ್ನನ್ನು ಆತನ ಪತ್ನಿ ಮಲ್ಲಿಕಾ ತಾಯಿ ಜಯ ಮತ್ತು ಸ್ಥಳದಲ್ಲಿದ್ದವರು ಮನೆಯ ಒಳಗೆ ಎಳೆದುಕೊಂಡು ಹೋಗಿದ್ದರು. ಅಂದು ರಾತ್ರಿ ಸಂಭವಿಸಿದ್ದು ಇಷ್ಟೇ ಘಟನೆ ಎಂದು ದೂರಿನಲ್ಲಿ ವಿವರಿಸಿರುವ ಟೈಸಿನ್, ಯಶ್ವಂತ್ನನ್ನು ಕಿರಣ್ ಚಿನ್ನಪ್ಪ ಅಪಹರಿಸಿದ್ದಾರೆ ಎಂದು ಮರುದಿನದಿಂದ ಹುಟ್ಟಿಕೊಂಡ ಸುದ್ದಿ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.
ಇದರ ಹಿಂದೆ ಬೇರೆಯವರ ಕೈವಾಡ ಇದೆ. ಕಳೆದ ೪೦ ವರ್ಷಗಳಿಂದ ಇರುವ ಆಸ್ತಿ ವಿಚಾರದ ದ್ವೇಷಕ್ಕೆ ಪ್ರತಿಕಾರವಾಗಿ ವ್ಯಕ್ತಿಯೋರ್ವ ತನ್ನ ಪತಿ ಕಿರಣ್ ಚಿನ್ನಪ್ಪ ಅವರನ್ನು ಬಲಿಪಶು ಮಾಡಿಸಿದ್ದಾರೆ. ಕೆಲವರನ್ನು ಸಂಪೂರ್ಣವಾಗಿ ತನಿಖೆಗೊಳಪಡಿಸಿದರೆ ಮತ್ತಷ್ಟು ಸತ್ಯ ಹೊರಬರುವುದು ಖಚಿತವಾಗಿದೆ. ಮೃತನ ಪತ್ನಿ ಮಲ್ಲಿಕಾ ಪೊಲೀಸರಿಗೆ ನೀಡಿದ ದೂರು ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಸುಳ್ಳು ಸುಳ್ಳನ್ನೇ ದೂರಿನಲ್ಲಿ ಬರೆದಿದ್ದಾರೆ ಎಂದು ಅವರು ಎಸ್ಪಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತಿ ಕಿರಣ್ ಚಿನ್ನಪ್ಪ ಅವರ ಮೊಬೈಲ್ ಲೊಕೇಶನ್ ಶೋಧಿಸಿದರೆ ಪೊಲೀಸರಿಗೆ ಸತ್ಯಾಂಶ ಅರಿವಾಗುತ್ತಿತ್ತು. ಅಮಾಯಕ ಪತಿ ಕಿರಣ್ ಚಿನ್ನಪ್ಪ ಅವರ ಬಂಧನ ತೀರ ಅನ್ಯಾಯವಾದದ್ದು. ಮಲ್ಲಿಕಾ ಪೊಲೀಸರಿಗೆ ನೀಡಿದ ದೂರಿನಲ್ಲೂ ಗೊಂದಲವಿದ್ದು, ಅವರ ಎರಡು ಮೂರು ರೀತಿಯ ಹೇಳಿಕೆ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
(ಮೊದಲ ಪುಟದಿಂದ) ತಾ. ೩ರಂದು ಯಶ್ವಂತ್ ಕುಮಾರ್ನನ್ನು ಕಿರಣ್ ಮನೆಯಿಂದ ಎಳೆದುಕೊಂಡು ಹೋಗಿದ್ದರೆ ಯಶ್ವಂತ್ನ ಪತ್ನಿ ಮಲ್ಲಿಕಾ ಏಕೆ ಕೂಡಲೇ ಪೊಲೀಸರಿಗೆ ದೂರು ನೀಡಲಿಲ್ಲ. ಕನಿಷ್ಟ ಮರುದಿನವಾದರೂ ಪೊಲೀಸರಿಗೆ ದೂರು ನೀಡಬಹುದಿತ್ತು. ಎರಡು ದಿನಗಳ ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಕಾರಣವೇನು ಎಂದು ಪ್ರಶ್ನಿಸಿ, ನಿರ್ಧೂಷಿ ಕಿರಣ್ಗೆ ನ್ಯಾಯ ಕೊಡಿಸುವಂತೆ ಕೋರಿದ್ದಾರೆ.