ಸಿದ್ದಾಪುರ, ಅ. ೧೭: ಅರೆಕಾಡು ಗ್ರಾಮದ ಬಳಂಜಿಕೆರೆಯ ಶ್ರೀ ಚಾಮುಂಡೇಶ್ವರಿ (ಐದ್ರೋಡಮ್ಮ) ದೇವಾಲಯದ ೧೪ನೇ ವರ್ಷದ ವಾರ್ಷಿಕೋತ್ಸವ ಪೂಜಾ ಕೈಂಕರ್ಯಗಳು ತಾ. ೨೪ ಹಾಗೂ ೨೫ ರಂದು ದೇವಾಲಯದ ಆವರಣದಲ್ಲಿ ನಡೆಯಲಿದೆ. ತಾ. ೨೪ ರಂದು ಸಂಜೆ ೬ ಗಂಟೆಗೆ ಮಹಾಪೂಜೆ ನಡೆಯಲಿದೆ. ತಾ. ೨೫ ರಂದು ಬೆಳಿಗ್ಗೆ ೭ ರಿಂದ ಅಪರಾಹ್ನ ೧ ಗಂಟೆವರೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.