ಪೆರಾಜೆ, ಅ. ೧೮: ಪೆರಾಜೆಯ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲದಿAದ ಅಡ್ಕಾರ್ ವನವಾಸಿ ಕಲ್ಯಾಣ ಬಾಲಕರ ವಸತಿ ನಿಲಯದ ವಠಾರದಲ್ಲಿ ಬೆಳೆದ ಕಳೆಗಿಡಗಂಟಿ ಗಳನ್ನು ತೆಗೆಯಲಾಯಿತು.
ಈ ಕಾರ್ಯದಲ್ಲಿ ಚಿಗುರು ಯುವಕ ಮಂಡಲದ ಅಧ್ಯಕ್ಷ ಭುವನ್ ಕುಂಬಳಚೇರಿ, ಕಾರ್ಯದರ್ಶಿ ಜೀವನ್ ಮಜಿಕೋಡಿ, ಖಜಾಂಚಿ ಪ್ರವೀಣ್ ಮಜಿಕೋಡಿ, ಮಾಜಿ ಅಧ್ಯಕ್ಷ ಶೀತಲ್ ಕುಂಬಳಚೇರಿ, ಪೆರಾಜೆ ಗ್ರಾಮ ಪಂಚಾಯಿತಿ ಸದಸ್ಯ ಉದಯಚಂದ್ರ ಕುಂಬಳಚೇರಿ ಮತ್ತು ವನವಾಸಿ ಕಲ್ಯಾಣ ನಿಲಯದ ಅಧ್ಯಕ್ಷ ಡಾ. ಚಂದ್ರಶೇಖರ್, ಪದಾಧಿಕಾರಿ ಗಳಾದ ಶ್ರೀನಿವಾಸ್ ಉಬರಡ್ಕ, ಗುರುರಾಜ್ ಭಟ್ ಅಡ್ಕಾರ್ ಹಾಗೂ ಚಂದ್ರಶೇಖರ್ ದೊಡ್ಡೆರಿ ಸೇರಿದಂತೆ ಚಿಗುರು ಯುವಕಮಂಡಲದ ಸದಸ್ಯರು ಭಾಗವಹಿಸಿದ್ದರು.