ಮಡಿಕೇರಿ, ಅ. ೧೮: ಎಲ್.ಜಿ ಕ್ರೆಸೆಂಟ್ ಶಾಲೆ ಹಾಗೂ ಪೈ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಸಮಾರಂಭವನ್ನು ಫೌಂಡೇಶನ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ವಾತಿ ಕಪಾಡಿಯಾ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕ ಸ್ವಯಂ ಅಭಿವೃದ್ಧಿಯನ್ನು ಬೆಳೆಸಿಕೊಳ್ಳುವಲ್ಲಿ ಶಿಬಿರವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು
ಸಮಾರಂಭದಲ್ಲಿ ಎ. ಎಲ್. ಜಿ ಕ್ರೆಸೆಂಟ್ನ ಪ್ರಾಂಶುಪಾಲೆ ಜೋಯ್ಸಿ ವಿನಯಾ, ಪೈ ಫೌಂಡೇಶನ್ನ ಕಾರ್ಯದರ್ಶಿ ಹೂಫ್ರೀಜ್, ಸಂಪನ್ಮೂಲ ವ್ಯಕ್ತಿಗಳಾದ ರಾಜೀವ್ ಲವ್ ಮತ್ತು ಸಚಿನ್ ಕಾಮತ್ ಉಪಸ್ಥಿತರಿದ್ದರು.