*ಗೋಣಿಕೊಪ್ಪ, ಅ. ೧೭: ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪಡೆದು ಕೊಳ್ಳಲು ಗ್ರಾ.ಪಂ. ವಾರ್ಷಿಕ ಸಮಗ್ರ ನಿರ್ವಹಣೆ, ನವೀನತೆಯ ಕಾರ್ಯಕ್ರಮಗಳು ಮತ್ತು ಸ್ಥಳೀಯರು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಮೇಲೆ ಇಟ್ಟಿರುವ ವಿಶ್ವಾಸದಿಂದ ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿಸದಾ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮದ ಸ್ವಚ್ಛತೆಗೆ ನೂತನ ಕಸವಿಲೇವಾರಿ ವಾಹನಕ್ಕೆ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಮತ್ತು ಸದಸ್ಯರು ಚಾಲನೆ ನೀಡಿದ ಸಂದರ್ಭ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗ್ರಾಮವನ್ನು ಅಭಿವೃದ್ಧಿಪಡಿಸ ಬೇಕೆಂಬ ಸದಸ್ಯರ ಆಸಕ್ತಿ ಮತ್ತು ಚಿಂತನೆಯಿAದಾಗಿ ಗ್ರಾಮ ಪಂಚಾಯಿತಿ ಗ್ರೇಡ್ ಒನ್ ಪಂಚಾಯಿತಿಯಾಗಿ ಗುರುತಿಸಿ ಕೊಂಡಿದೆ ಎಂದರು.

ಗಾAಧಿ ಗ್ರಾಮ ಪುರಸ್ಕಾರದಿಂದ ದೊರೆಯುವ ೫ ಲಕ್ಷ ಹಣ ಗ್ರಾಮದ ಅಭಿವೃದ್ಧಿಗೆ ಸದುಪಯೋಗ ವಾಗಲಿದೆ ಎಂದು ಹೇಳಿದರು. ೧೩ ಲಕ್ಷದಲ್ಲಿ ಪಂಚಾಯಿತಿ ಕಟ್ಟಡದ ಸಮೀಪದಲ್ಲಿರುವ ವಾಣಿಜ್ಯ ಮಳಿಗೆಯ ಮೇಲಂತಸ್ತು ಕಟ್ಟಡ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗ್ರಾ.ಪಂ. ಸದಸ್ಯರುಗಳಾದ ಮೂಕಳೇರ ಮಧುಕುಮಾರ್, ಮಚ್ಚಮಾಡ ಡಿ. ವಿಮಲ, ರವಿ. ಹೆಚ್.ಎನ್, ಪಿ.ಡಿ. ನೇತ್ರಾವತಿ, ಕೆ.ವಿ. ರಾಮಕೃಷ್ಣ, ಅಮ್ಮತ್ತಿರ ಆರತಿ ಸುರೇಶ್, ಪಿ.ಜಿ. ಯಮುನಾ, ಪಿ.ಕೆ. ವಿಜಯಕುಮಾರ್, ಅಣ್ಣೀರ ಎಂ. ಹರೀಶ್, ಕೆ.ಡಿ. ಯಮುನಾ, ಕರ್ತಮಾಡ ರಸಿಕ ಅಶ್ವತ್, ಮಂಜುಳಾ ಮಣಿಕಂಠ, ನಿಲನ್ ಸುಬ್ರಮಣಿ, ಸಿ.ಎ. ಜುನೈದಾ, ಪಿ.ಟಿ. ರಮೇಶ್, ಮೂಕಳೇರ ಸುಮಿತಾ, ಅಬ್ದುಲ್ ಅಜಿûÃಜ್, ಆಲೀರ ಎಂ.ರಶೀದ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಹಾಗೂ ಸಿಬ್ಬಂದಿಗಳು ಇದ್ದರು.