ಮಡಿಕೇರಿ, ಅ. ೧೭: ಹಿಂದೂಗಳನ್ನು ಪೆಟ್ರೋಲ್ ಬಾಂಬ್ ಸಿಡಿಸಿ ಸಾಮೂಹಿಕವಾಗಿ ಹತ್ಯೆಗೈಯ್ಯಬೇಕು ಎಂಬ ಸಂಭಾಷಣೆ ನಡೆಸಿದ್ದ ಈರ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವದರೊಂದಿಗೆ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಐವತ್ತು ಜನರ ತಂಡ ಕಟ್ಟಿಕೊಂಡು ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಹಿಂದೂಗಳ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಸಾಮೂಹಿಕವಾಗಿ ಹತ್ಯೆ ಮಾಡುವ ಬಗ್ಗೆ ಮಡಿಕೇರಿ ನಗರಸಭೆಯ ಜೆಡಿಎಸ್ ಸದಸ್ಯ ಹಾಗೂ ಬೆಟ್ಟಗೇರಿಯ ಅಬ್ದುಲ್ಲ ಎಂಬವರುಗಳು ಮೊಬೈಲ್ನಲ್ಲಿ ಮಾತನಾಡಿ ಕೊಂಡಿರುವ ಸಂದೇಶಗಳು ವೈರಲ್ ಮಡಿಕೇರಿ, ಅ. ೧೭: ಹಿಂದೂಗಳನ್ನು ಪೆಟ್ರೋಲ್ ಬಾಂಬ್ ಸಿಡಿಸಿ ಸಾಮೂಹಿಕವಾಗಿ ಹತ್ಯೆಗೈಯ್ಯಬೇಕು ಎಂಬ ಸಂಭಾಷಣೆ ನಡೆಸಿದ್ದ ಈರ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವದರೊಂದಿಗೆ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಐವತ್ತು ಜನರ ತಂಡ ಕಟ್ಟಿಕೊಂಡು ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಹಿಂದೂಗಳ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಸಾಮೂಹಿಕವಾಗಿ ಹತ್ಯೆ ಮಾಡುವ ಬಗ್ಗೆ ಮಡಿಕೇರಿ ನಗರಸಭೆಯ ಜೆಡಿಎಸ್ ಸದಸ್ಯ ಹಾಗೂ ಬೆಟ್ಟಗೇರಿಯ ಅಬ್ದುಲ್ಲ ಎಂಬವರುಗಳು ಮೊಬೈಲ್ನಲ್ಲಿ ಮಾತನಾಡಿ ಕೊಂಡಿರುವ ಸಂದೇಶಗಳು ವೈರಲ್ ಹಿಂಜಾವೆ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್ ಮಾತನಾಡಿ; ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ದುಷ್ಕರ್ಮಿಗಳು ಹಿಂದೂಗಳ ಹತ್ಯೆಗೆ ವ್ಯವಸ್ಥಿತ ತಯಾರಿ ಮಾಡಿಕೊಂಡಿದ್ದಾರೆ, ಇದರ ವಿರುದ್ಧ ಜಾಗೃತರಾಗಿ ಹೋರಾಟ ಮಾಡಬೇಕಿದೆ. ನಿಷೇಧಿತ ಪಿಎಫ್ಐ ಹಾಗೂ ಎಸ್ಡಿಪಿಐ ಸಂಪರ್ಕವಿರುವ ವ್ಯಕ್ತಿಗಳಿಂದ
(ಮೊದಲ ಪುಟದಿಂದ) ಇಂತಹ ಕೃತ್ಯಗಳಾಗುತ್ತಿದ್ದು, ಈರ್ವರು ಆರೋಪಿಗಳು ಸೇರಿದಂತೆ ನಿಷೇಧಿತ ಸಂಘಟನೆಗಳ ಸಂಪರ್ಕವಿರುವ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರುಗಳ ವಿರುದ್ಧ ಎನ್ಐಎ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಅಲ್ಲದೆ, ನಗರಸಭಾ ಸದಸ್ಯ ಮುಸ್ತಫಾ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು. ದೇಶದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಕಂಡುಬರುತ್ತಿದ್ದು, ಇಂತಹ ಕೃತ್ಯಗಳನ್ನು ಯಾವದೇ ಮುಸ್ಲಿಮರು ಖಂಡಿಸುತ್ತಿಲ್ಲ. ಎಲ್ಲರೂ ಸಮಾನರಾಗಿ ಬದುಕು ಸಾಗಿಸಬೇಕೆಂಬ ಉದ್ದೇಶ ಹೊಂದಿರುವ ದೇಶದಲ್ಲಿ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗೃಹ ಇಲಾಖೆ ಈ ಬಗ್ಗೆ ಗಮನಹರಿಸಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ. ಈ ವಿಚಾರವನ್ನು ದೇಶದ ಪ್ರಧಾನಮಂತ್ರಿವರೆಗೂ ಕೊಂಡೊಯ್ಯಲಾಗುವದೆAದು ಹೇಳಿದರು.
ಹಿಂಜಾವೇ ಪ್ರಮುಖ ವಿನಯ್ ಮಾತನಾಡಿ; ಮಡಿಕೇರಿಯಲ್ಲಿ ದೇಶವನ್ನೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಅಶಾಂತಿ ಸೃಷ್ಟಿಸುವ ಹುನ್ನಾರವಾಗಿದೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವದಾಗಿ ಹೇಳಿದರು.
ನಂತರ ನಗರ ಸಬಾಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಪೌರಾಯುಕ್ತ ವಿಜಯ್ ಅವರುಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಖೇಶ್, ಸದಸ್ಯರುಗಳಾದ ಮಹೇಶ್ ಜೈನಿ, ಅರುಣ್ಶೆಟ್ಟಿ, ಕೆ.ಎಂ.ಅಪ್ಪಣ್ಣ, ಸತೀಶ್ಕುಮಾರ್, ಚಂದ್ರಶೇಖರ್, ಶ್ವೇತಾ, ಸಬಿತಾ, ಮಂಜುಳಾ, ಉಷಾ, ಕವನ್ ಕಾವೇರಪ್ಪ, ಗೌರಿ, ಮಾಜಿ ಸದಸ್ಯೆ ಶಿವಕುಮಾರಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರಾಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಜಗದೀಶ್, ಮಾಜಿ ಜಿಲ್ಲಾಧ್ಯಕ್ಷ ಭಾರತೀಶ್, ಹಿಂಜಾವೇ ಪ್ರಮುಖರಾದ ಕುಮಾರ್, ಡೀನ್ ಬೋಪಣ್ಣ, ಶೇಷಪ್ಪ ರೈ, ಪ್ರಶಾಂತ್, ನವೀನ್ ಪೂಜಾರಿ, ಮಂಜುನಾಥ್, ಡಿಶು ಇನ್ನಿತರರು ಪಾಲ್ಗೊಂಡಿದ್ದರು.