ಮಡಿಕೇರಿ, ಅ. ೧೭: ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಯು ೨೦೨೪ರಲ್ಲಿ ಫ್ರಾನ್ಸ್ ದೇಶದ ಲಿಯಾನ್‌ನಲ್ಲಿ ನಡೆಯಲಿದೆ.
ಒಂದು ಸಾವಿರಕ್ಕೂ ಹೆಚ್ಚಿನ ಯುವ ಜನತೆ ೫೫ ಕ್ಕೂ ಹೆಚ್ಚು ಕೌಶಲ್ಯದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅತಿದೊಡ್ಡ ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಶ್ರೇಷ್ಠತೆಯ ಕಾರ್ಯಕ್ರಮವಾಗಿದೆ.
ಈ ಸ್ಪರ್ಧೆಗೆ ಪೂರಕವಾಗಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಇಂಡಿಯಾ ಸ್ಕಿಲ್ ಕರ್ನಾಟಕ ೨೦೨೩ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಜಿಲ್ಲಾ, ವಲಯ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದವರಿಗೆ ನಿರಂತರ ತರಬೇತಿ ಒದಗಿಸಿ ಪ್ರಾದೇಶಿಕ ಮತ್ತು ರಾಷ್ಟçಮಟ್ಟದಲ್ಲಿ ಗೆಲುವು ಸಾಧಿಸಲು ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಲು ವೇದಿಕೆ ಕಲ್ಪಿಸಿಕೊಡುವುದು ಇಂಡಿಯಾ ಸ್ಕಿಲ್ ಕರ್ನಾಟಕ ೨೦೨೩ ಸ್ಪರ್ಧೆಯ ಮುಖ್ಯ ಗುರಿಯಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸು ವವರು hಣಣಠಿs://ತಿತಿತಿ. ಞಚಿushಚಿಟಞಚಿಡಿ.ಛಿom/ಚಿಠಿಠಿ/ತಿoಡಿಟಜ-sಞiಟಟ-ಡಿegisಣಡಿಚಿಣioಟಿ ಲಿಂಕ್ ಅಥವಾ ಕ್ಯೂ ಆರ್ ಕೋಡ್ ಸ್ಕಾö್ಯನ್ ಬಳಸುವ ಮೂಲಕ ನವೆಂಬರ್, ೧೫ ರೊಳಗೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಅಥವಾ ಕಚೇರಿಯ ಜಿಲ್ಲಾ ಸಂಯೋಜಕ ರವಿಕುಮಾರ್ ಎನ್.ಆರ್. ಅವರ ದೂ.ಸಂ. ೯೧೧೩೯೩೫೨೨೦ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.