ಮಡಿಕೇರಿ, ಅ. ೧೭: ವೀರಾಜಪೇಟೆ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಕೆರೆ ಹಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಣಿಗೊAಡ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆಯು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ಐಶ್ವರ್ಯ ಚಾರಿಟೆಬಲ್ ಟ್ರಸ್ಟ್ ಹಾಗೂ ಸ್ನೇಹಾಶ್ರಯ ಯೂತ್ ಟ್ರಸ್ಟ್ ವತಿಯಿಂದ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರೀನ್ ಮುತ್ತಣ್ಣ ಮಾತನಾಡಿ, ಗಿರಿಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮನರೇಗಾ ಕೂಲಿಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ವೈದ್ಯ ಡಾ. ಅಶೋಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅನೇಕ ಖಾಯಿಲೆಗಳು ಕಂಡುಬರುತ್ತಿದ್ದು, ಉಚಿತ ಆರೋಗ್ಯ ಶಿಬಿರದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಇದ್ದರೆ, ಅದನ್ನು ಗುರುತಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಉಚಿತ ಆರೋಗ್ಯ ಶಿಬಿರದಲ್ಲಿ ಪ್ರಮುಖವಾಗಿ ರಕ್ತ ಪರೀಕ್ಷೆಗಳನ್ನು ಕೈಗೊಂಡು ಮಧುಮೇಹ, ರಕ್ತದೊತ್ತಡ, ಹೃದಯಕ್ಕೆ ಸಂಬAಧಿಸಿದAತೆ, ಕಣ್ಣಿನ ಸಮಸ್ಯೆಗಳು, ಕಿವಿಗಳಿಗೆ ಸಂಬAಧಿಸಿದ ಎಲ್ಲಾ ರೀತಿಯ ಆರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಯಿತು.
ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ ಪ್ರಭು, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಚಕ್ಕೇರಾ ಸೂರಿ ಅಯ್ಯಪ್ಪ, ಸದಸ್ಯರುಗಳಾದ ಆರ್. ಪವಿತಾ, ಪಿ. ಅಮ್ಮಣ್ಣಿ, ಹಾಡಿ ಅಧ್ಯಕ್ಷ ದಾಸಪ್ಪ, ವೈದ್ಯ ಡಾ. ಅಶೋಕ್, ಶಾಲಾ ಮುಖ್ಯ ಶಿಕ್ಷಕಿ ಯಶಸ್ವಿನಿ, ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಮಹೇಂದ್ರ, ತಾಂತ್ರಿಕ ಸಂಯೋಜಕ ನಿರಂಜನ್, ತಾಲೂಕು ಐ.ಇ.ಸಿ. ಸಂಯೋಜಕ ನರೇಂದ್ರ, ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರು ಐಶ್ವರ್ಯ ಚಾರಿಟೆಬಲ್ ಟ್ರಸ್ಟ್ ಹಾಗೂ ಸ್ನೇಹಾಶ್ರಯ ಯೂತ್ ಟ್ರಸ್ಟ್ ಸಿಬ್ಬಂದಿಗಳು, ನಿಟ್ಟೂರು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳಾದ ಪೂಣಚ್ಚ, ಉಷಾ ಹಾಗೂ ನಿಟ್ಟೂರು ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.