ಕೂಡಿಗೆ, ಅ. ೧೭ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್‌ನ ಜಿಲ್ಲಾ ಘಟಕದ ವತಿಯಿಂದ ಶಾಲೆಯ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ, ಎಸ್.ಡಿಎಂ.ಸಿ.ಯ ಸಂಯುಕ್ತಾಶ್ರಯದಲ್ಲಿ ವಿಶ್ವ ಕೈ ತೊಳೆಯುವ ದಿನದ ಅಂಗವಾಗಿ ಪರಿಸರ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ವಿಶ್ವ ಕೈ ತೊಳೆಯುವ ಆಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಮಕ್ಕಳು ಆಹಾರ ಸೇವಿಸುವ ಮುನ್ನ ತಮ್ಮ ಕೈಯನ್ನು ಸ್ವಚ್ಛವಾಗಿ ತೊಳೆಯಬೇಕು ಎಂದರು. ವಿಶ್ವ ಕೈತೊಳೆಯುವ ದಿನದ ಮಹತ್ವ ಕುರಿತು ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ಮಾಹಿತಿಯಿತ್ತರು. ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಸ್.ಎಂ.ಗೀತಾ, ನಯನ, ಸಿಬ್ಬಂದಿಗಳಾದ ಎಂ.ಉಷಾ, ಚಂದ್ರಮ್ಮ ಇದ್ದರು.ಮುಳ್ಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್ ರಾಜ್ ಇಲಾಖೆ ಮತ್ತು ಆಲೂರುಸಿದ್ದಾಪುರ ಗ್ರಾ.ಪಂ. ವತಿಯಿಂದ ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಯಿತು. ಸ್ವಚ್ಛ ಭಾರತ್ ಮಿಷನ್ ಸಂಸ್ಥೆಯ ‘ನಮ್ಮ ನಡಿಗೆ-ತ್ಯಾಜ್ಯ ಮುಕ್ತ ಕಡೆಗೆ’ ಶೀರ್ಷಿಕೆಯಡಿಯಲ್ಲಿ ಆರೋಗ್ಯ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ವಿಶ್ವ ಕೈತೊಳೆಯುವ ದಿನವನ್ನು ಆಚರಿಸಲಾಯಿತು

ಆಲೂರುಸಿದ್ದಾಪುರ ಗ್ರಾ.ಪಂ.ಪಿಡಿಓ ಹರೀಶ್ ದಿನದ ಕುರಿತು ಮಾಹಿತಿ ನೀಡಿದರು. ವೈಯಕ್ತಿಕ ಆರೋಗ್ಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಕೈತೊಳೆದುಕೊಳ್ಳುವ ವಿಧಾನದ ಬಗ್ಗೆ ಹಿರಿಯ ಆಶಾ ಕಾರ್ಯಕರ್ತೆ ಶುಭ ಮಾಹಿತಿಯಿತ್ತರು. ಈ ಸಂದರ್ಭ ಗ್ರಾ.ಪಂ.ಉಪಾಧ್ಯಕ್ಷೆ ದಮಯಂತಿ, ತಾಲೂಕು ಕೆಡಿಪಿ ಸಮಿತಿ ಅಧ್ಯಕ್ಷ ಪಿ.ಎನ್.ಗಂಗಾಧರ್, ಗ್ರಾ.ಪಂ.ಸದಸ್ಯರು ಮತ್ತು ಸಾರ್ವಜನಿಕರು ಹಾಜರಿದ್ದರು.