ಕೂಡಿಗೆ, ಅ. ೧೭: ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕುಶಾಲನಗರ ತಹಶೀಲ್ದಾರ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ತಾ. ೨೧ ರಂದು ಬೆಳಗ್ಗೆ ೧೧ ಗಂಟೆಯಿAದ ೧೨ರ ತನಕ ಕುಶಾಲನಗರ ನಗರ ಹೋಬಳಿ ನಾಡು ಕಚೇರಿಯಲ್ಲಿ ಕುಶಾಲನಗರ ಹೋಬಳಿ ಎಲ್ಲಾ ಗ್ರಾಮಗಳ ಜನತೆಗೆ ಪೌತಿ ಖಾತೆ ಬದಲಾವಣೆ ,ಪಟ್ಟೆ ದಾರಿಕೆ ಬದಲಾವಣೆ ಹಾಗೂ ತೊರೆನೂರು ವೃತ್ತದ ದೊಡ್ಡ ಅಳುವಾರ, ಚಿಕ್ಕ ಅಳುವಾರ ಗ್ರಾಮಗಳ ಜನತೆಗೆ ಪಹಣಿಯಲ್ಲಿ ತಿದ್ದುಪಡಿ ಸಂಬAಧ ಆಂದೋಲನ ಏರ್ಪಡಿಸಲಾಗಿದೆ.
ಅಗತ್ಯ ದಾಖಲಾತಿಗಳಾದ ಮೂಲ ಜಮಾಬಂದಿ, ಪಹಣಿ, ಆಕಾರ್ ಬಂದಿ, ವಂಶವೃಕ್ಷ, ಮರಣ ದೃಢೀಕರಣ ಪತ್ರ ನೈಜ ದೃಡೀಕೃತ ದಾಖಲೆಗಳೊಂದಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಪ ತಹಶೀಲ್ದಾರ್ ಕೆ.ಜೆ. ಮಧುಸೂದನ್ ತಿಳಿಸಿದ್ದಾರೆ.