ಪೊನ್ನಂಪೇಟೆ, ಅ. ೧೮: ಗೋಣಿ ಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವತಿಯಿಂದ ಪೊನ್ನಂಪೇಟೆ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಗೀತಗಾಯನ ಸ್ಪರ್ಧೆ ಇಂಚರ-೨೦೨೨ಕ್ಕೆ ಗಾಯಕ ರಾದ ಚೆಕ್ಕೆರ ಪಂಚಮ್ ತ್ಯಾಗರಾಜ್ ಹಾಗೂ ಮಾಳೇಟಿರ ಅಜಿತ್ ಪೂವಣ್ಣ ತಮ್ಮ ಗಾಯನದ ಮೂಲಕ ಚಾಲನೆ ನೀಡಿದರು.

ಗೋಣಿಕೊಪ್ಪಲು ಜಿಆರ್‌ಸಿ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಾನಪದ ಮತ್ತು ಕನ್ನಡ ಚಲನಚಿತ್ರಗೀತೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.

ಜಾನಪದ ಗೀತೆಗಾಯನ ಸ್ಪರ್ಧೆಯಲ್ಲಿ ದೇವರಪುರ ರಾಜ ರಾಜೇಶ್ವರಿ ಶಾಲೆಯ ಪಿ.ಎ. ಸರಸ್ವತಿ ಪ್ರಥಮ, ಕಳತ್ಮಾಡು ಲಯನ್ಸ್ ಶಾಲೆಯ ಕೆ.ಡಿ. ಭಾಷಿತ ದ್ವಿತೀಯ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಕೆ. ಪ್ರಿಯದರ್ಶಿನಿ ತೃತೀಯ ಸ್ಥಾನ ಪಡೆದುಕೊಂಡರು.

ಚಲನಚಿತ್ರ ಗೀತೆಗಾಯನ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಬಿ.ಎಸ್. ಕೀರ್ತಿ ಪ್ರಥಮ, ಕಳತ್ಮಾಡು ಲಯನ್ಸ್ ಶಾಲೆಯ ಎಂ.ಆರ್. ಗೆಹ್ನ ದ್ವಿತೀಯ ಸ್ಥಾನ, ಅಮ್ಮತ್ತಿ ಸರ್ಕಾರಿ ಪ್ರೌಢ ಶಾಲೆಯ ಹೆಚ್.ಡಿ. ಕೀರ್ತನ ತೃತೀಯ ಸ್ಥಾನ ಪಡೆದುಕೊಂಡರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಜಿಆರ್‌ಸಿ ಬ್ಯಾಂಕ್‌ನ ವ್ಯವಸ್ಥಾಪಕ ವಿ.ಕೆ. ಪ್ರತಾಪ್, ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ, ಹಿರಿಯ ಉಪನ್ಯಾಸಕಿ ಎಂ.ಕೆ. ಪದ್ಮ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಕೆ.ಎಂ. ಕುಸುಮ್, ವಿದ್ಯಾರ್ಥಿ ಕ್ಷೇಮಭಿವೃದ್ಧಿ ಸಂಘದ ಸಂಚಾಲಕಿ ಪಿ.ಎಸ್. ದಿವ್ಯ ಹಾಗೂ ಸಿಬ್ಬಂದಿ ಇದ್ದರು.

ಗಾಯಕರಾದ ಚೆಕ್ಕೆರ ಪಂಚಮ್ ತ್ಯಾಗರಾಜ್ ಹಾಗೂ ಮಾಳೇಟಿರ ಅಜಿತ್ ಪೂವಣ್ಣ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಿ ನಳಿನಿ ಕಾರ್ಯಕ್ರಮದ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು. ಉಪನ್ಯಾಸಕಿ ಪಿ.ಸಿ. ಮೀನಾಕ್ಷಿ ಸ್ವಾಗತಿಸಿ, ವಿಪ್ರ ನೀಲಮ್ಮ ವಂದಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ, ಯಸ್ಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಪೊನ್ನಂಪೇಟೆ ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ೨೨ ವಿದ್ಯಾರ್ಥಿಗಳು ಭಾಗವಹಿಸಿದ್ದರು.