ನಾಪೋಕ್ಲು, ಅ. ೧೮: ಈದ್ ಮಿಲಾದ್ ಅಂಗವಾಗಿ ಮರ್ಕಝುಲ್ ಹಿದಾಯ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಸಂಯುಕ್ತ ಆಶ್ರಯದಲ್ಲಿ ಅನ್ನೂರುಲ್ ಮುಬೀನ್ ಮಿಲಾದ್ ರ‍್ಯಾಲಿಯು ಹಳೆ ತಾಲೂಕು ಜಿಎಂಪಿ ಶಾಲಾ ಮೈದಾನದಿಂದ ನಾಪೋಕ್ಲು ಮಾರುಕಟ್ಟೆವರೆಗೆ ನಡೆಯಿತು.

ಈ ಸಂದರ್ಭ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮಹಮದ್ ಹಾಜಿ ಕುಂಜಿಲ ಮಾತನಾಡಿ, ಇದು ಜನರಲ್ಲಿ ಸಾಮರಸ್ಯವನ್ನು ಉಂಟುಮಾಡುವ ಕಾರ್ಯಕ್ರಮವಾಗಿದ್ದು ಪ್ರವಾದಿ ಮಹಮ್ಮದ್ ಜನ್ಮ ದಿನಾಚರಣೆಯ ಅಂಗವಾಗಿ ಶಾಂತಿಯ ಸಂದೇಶವನ್ನು ಸಾರುವ ಕಾರ್ಯಕ್ರಮವಾಗಿದೆ ಎಂದರು.

ಮರ್ಕಝ್ ದಅವಾ ಕಾಲೇಜು ಪೂರ್ವ ವಿದ್ಯಾರ್ಥಿ ಫಾರೂಕ್ ಅಹ್ಮದ್ ಸಖಾಫಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಯಿಬ್ ಖಾಝಿ ಶಾದುಲಿ ಫೈಜಿ, ಮರ್ಕಝ್‌ನ ಪ್ರಾಂಶುಪಾಲ ಶಿಹಾಬುದ್ದೀನ್ ನೂರಾನಿ, ಕೋಶಾಧಿಕಾರಿ ಅಬ್ದುಲ್ಲ ಕೊಟ್ಟಮುಡಿ, ಮರ್ಕಝ್‌ನ ಉಪಾಧ್ಯಕ್ಷರುಗಳಾದ ಯೂಸುಫ್ ಹಾಜಿ ಕೊಂಡAಗೇರಿ, ಸಿ.ಕೆ. ಅಹ್ಮದ್ ಹಾಜಿ ಆಝಾದ್ ನಗರ, ಅಶ್ರಫ್ ಸಖಾಫಿ, ಸದರ್ ಮುಅಲ್ಲಿಂ ಮರ್ಕಝ್ ಕೊಟ್ಟಮುಡಿ, ಪ್ರಮುಖರಾದ ಅಬ್ದುಲ್ಲ ಸಖಾಫಿ ಕೊಳಕೇರಿ, ಅಬ್ಬಾಸ್ ಸಖಾಫಿ, ಹಾರಿಸ್ ಸಿ.ಎಂ. ಕೊಳಕೇರಿ, ಹನೀಫ್ ಸಖಾಫಿ ಕೊಂಡAಗೇರಿ, ಅರಫಾತ್ ನಾಪೋಕ್ಲು, ಅದ್ದು ಹಾಜಿ ಲಿಮ್ರಾ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್., ಎಸ್.ಎಸ್.ಎಫ್.ನ ಕಾರ್ಯಕರ್ತರು ಮತ್ತು ಮರ್ಕಝ್ ದಅವಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಮರ್ಕಝ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ದಫ್ ಪ್ರದರ್ಶನ ನಡೆಸಿದರು.