ಸುಂಟಿಕೊಪ್ಪ, ಅ. ೧೬: ಸುಂಟಿಕೊಪ್ಪ ಮಲೆಯಾಳಿ ಸಮಾಜದ ೧೫ನೇ ವರ್ಷದ ಓಣಂ ಆಚರಣೆಯು ತಾ.೧೭ ರಂದು (ಇಂದು) ೧೧ ಗಂಟೆಗೆ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ತಾ. ೧೭ ರಂದು ಬೆಳಿಗ್ಗೆ ೭.೩೦ಕ್ಕೆ ಪೂಕಳಂ ಸ್ಪರ್ಧೆ ನಡೆಯಲಿದೆ. ಓಣಾಘೋಷ ಯಾತ್ರೆ ಮೆರವಣಿಗೆಯು ಬೆಳಿಗ್ಗೆ ೧೦ ಗಂಟೆಗೆ ಚಂಡೆಮೇಳ ವಾದ್ಯಗೋಷ್ಠಿಯೊಂದಿಗೆ ಶ್ರೀ ರಾಮ ಮಂದಿರದಿAದ ಹೊರಡಲಿದೆ. ಸಮಾರಂಭವನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎ.ಸಂತೋಷ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯನ್, ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ.ಲೋಕೇಶ್ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸಮಾಜ ಸೇವಕ ಡಾ.ಮಂತರ್‌ಗೌಡ, ಹಿಂದೂ ಮಲೆಯಾಳಿ ಸಮಾಜದ ಗೌರವಧ್ಯಕ್ಷ ಕೆ.ಎಸ್.ರಮೇಶ್, ಹಿಂದೂ-ಮಲೆಯಾಳಿ ಸಮಾಜದ ಕಾರ್ಯದರ್ಶಿ ಶಶಿಕುಮಾರ್, ಚೆನ್ನಯ್ಯನಕೋಟೆ ಅಧ್ಯಕ್ಷ ರಥೀಶ್, ವಿಜಯ ಉದ್ಯಮಿ ಎಸ್.ಜಿ.ಶ್ರೀನಿವಾಸ್, ಸುಂಟಿಕೊಪ್ಪ ಮಲೆಯಾಳಿ ಸಮಾಜ ಉಪಾಧ್ಯಕ್ಷ ರಾಮಕೃಷ್ಣ, ಮಲೆಯಾಳಿ ಸಮಾಜದ ಗೌರವಧ್ಯಕ್ಷ ಭಾಸ್ಕರನ್ ಭಾಗವಹಿಸಲಿದ್ದಾರೆ.