'ಸೋಮವಾರಪೇಟೆ, ಅ. ೧೬: ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ತಾ.೧೮ರಂದು ಬೆಳಿಗ್ಗೆ ಪಟ್ಟಣದ ಜೇಸಿ ವೇದಿಕೆಯಲ್ಲಿ ಕಾವೇರಿ ತೀರ್ಥ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಎ.ನಾಗರಾಜು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೭ ವರ್ಷಗಳಿಂದ ಸೋಮವಾರಪೇಟೆ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಿಸಲಾಗುತ್ತಿದೆ. ತಾ.೧೭ರಂದು ಸಂಜೆ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದ್ದು, ಅಲ್ಲಿಂದ ತೀರ್ಥವನ್ನು ಸಂಗ್ರಹಿಸಿ ತರಲಾಗುವುದು ಎಂದರು.

ಉದ್ಯಮಿ ಹರಪಳ್ಳಿ ರವೀಂದ್ರ ಅವರು ತಾ. ೧೮ರಂದು ಬೆಳಿಗ್ಗೆ ೯.೩೦ಕ್ಕೆ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಜೇಸಿ ವೇದಿಕೆಯಲ್ಲಿ ತೀರ್ಥ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎಚ್.ಪಿ. ರಾಜಪ್ಪ, ಅಜಯ್, ಪುನೀತ್, ಜೇಕಬ್ ಸೈಮನ್ ಇದ್ದರು.