ಸುಂಟಿಕೊಪ್ಪ, ಅ. ೧೬: ಸಂತೆ ದಿನವಾದ ಭಾನುವಾರದಂದು ಮಾರುಕಟ್ಟೆಗೆ ಬಂದ ವ್ಯಕ್ತಿಯೋರ್ವ ಕೈಯಲ್ಲಿ ತಲ್ವಾರ್ ಹಿಡಿದು ಆತಂಕ ಹುಟ್ಟಿಸಿದ.

ಸುಂಟಿಕೊಪ್ಪದ ಸಂತೆ ಆವರಣಕ್ಕೆ ಮದ್ಯ ಹಾಗೂ ಮಾದಕ ವ್ಯಸನನಾಗಿರುವ ಜನತಾ ಕಾಲೋನಿ ನಿವಾಸಿ ಕೃಷ್ಣ ಎಂಬಾತ ಕೈಯಲ್ಲಿ ತಲ್ವಾರ್ ಹಿಡಿದು ಓಡಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತೆ ಮಾಡಿದ್ದಾನೆ. ಕೆಲವರು ಸಂತೆಯಿAದ ಖರೀದಿಸಿದ ಸಾಮಾಗ್ರಿಗಳನ್ನು ಬಿಟ್ಟು ಓಡಿ ಹೋಗುವಂತೆ ಮಾಡಿದ್ದಾನೆ. ನಂತರ ಮಾರುಕಟ್ಟೆಯ ಸಮೀಪದ ಉಲುಗುಲಿ ರಸ್ತೆಯಲ್ಲಿರುವ ಹೊಟೇಲಿಗೆ ನುಗ್ಗಿ ಅಲ್ಲಿ ಊಟ ಮಾಡುತ್ತಿರುವರೊಂದಿಗೆ ಬೊಬ್ಬೆ ಹಾಕಿ ಬೆದರಿಸಿ ತಿರುಗಾಡಿದ್ದಾನೆ.