ಮಡಿಕೇರಿ, ಅ. ೧೬: ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಎನ್‌ಸಿಸಿ ಕೆಡೆಟ್‌ಗಳಾದ ಅನನ್ಯ ಎಂ.ಆರ್. ಹಾಗೂ ಪ್ರಜ್ವಲ್ ಅಯ್ಯಪ್ಪ ಇವರುಗಳು ಕರ್ನಾಟಕ ಹಾಗೂ ಗೋವಾ ಡೈರಕ್ಟೋರೆಟ್ ಘಟಕದಿಂದ ಆಯ್ಕೆಯಾಗಿ ದೆಹಲಿಯಲ್ಲಿ ಜರುಗಿದ ಸೈನಿಕ ಶಿಬಿರ (ಎ.ಐ.ಟಿ.ಎಸ್‌ಸಿ)ದಲ್ಲಿ ಪಾಲ್ಗೊಂಡು ಸಾಧನೆಗೈದಿದ್ದಾರೆ.
ಇದೇ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ ಅವರು ಕರ್ನಾಟಕ ಹಾಗೂ ಗೋವಾ ಡೈರೆಕ್ಟೋರೇಟ್‌ನ ಕಾಂಟಿನ್ಜೆAಟ್ ಕಮಾಂಡರ್ ಆಗಿ ದೆಹಲಿಯಲ್ಲಿ ತಂಡವನ್ನು ಮುನ್ನಡೆಸಿದರು. ಅನನ್ಯ ಹಾಗೂ ಪ್ರಜ್ವಲ್ ಅಯ್ಯಪ್ಪ ಇವರುಗಳನ್ನು ಕರ್ನಾಟಕ ಬೆಟಾಲಿಯನ್‌ನಲ್ಲಿ ಮಂಗಳೂರು ಗ್ರೂಪ್ ಕಮಾಂಡರ್ ಕರ್ನಲ್ ಎನ್.ಕೆ. ಭಗ್ಸಾರ, ಕರ್ನಾಟಕ ಬೆಟಾಲಿಯನ್‌ನ ಕಮಾಂಡಿAಗ್ ಆಫೀಸರ್ ಕರ್ನಲ್ ಅರ್ಹಾನ ಲೆ.ಕ. ಚಕೋ. ಸು.ಮೇ. ಲೆಫ್ಟಿನೆಂಟ್ ಸುನಿಲ್ ಕುಮಾರ್ ಅಭಿನಂದಿಸಿದರು. ಕಾವೇರಿ ಕಾಲೇಜು ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಅಕ್ರಂ ಹಾಗೂ ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಎನ್.ಸಿ.ಸಿ. ಕೆಡೆಟ್‌ಗಳು ಬೆಟಾಲಿಯನ್‌ನ ಸಿಬ್ಬಂದಿ ಹಾಜರಿದ್ದರು.