ಮಡಿಕೇರಿ, ಅ. ೧೫: ಕೊಡಗು ಯುವ ಸೇನೆಯ ಜಿಲ್ಲಾ ಉಪಾಧ್ಯಕ್ಷರಾಗಿ ನಡುಮುಟ್ಲು ಪ್ರವೀಣ್ ಅವರು ನೇಮಕಗೊಂಡಿದ್ದಾರೆ. ಯುವಸೇನೆಯ ಭಾಗಮಂಡಲ ಹೋಬಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಿಸಲಾಗಿದ್ದು, ಭಾಗಮಂಡಲ ಹೋಬಳಿಗೆ ನೂತನ ಸಮಿತಿಯನ್ನು ರಚಿಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಯುವ ಸೇನೆಯ ಮುಖಂಡ ಕುಲದೀಪ್ ಪೂಣಚ್ಚ ಅವರು ತಿಳಿಸಿದ್ದಾರೆ.