ಸಿದ್ದಾಪುರ, ಅ. ೧೫: ಮಾಲ್ದಾರೆ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಕಟ್ಟಡವನ್ನು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಉದ್ಘಾಟನೆ ಮಾಡಿದರು. ರೈತರು ಹೆಚ್ಚು ಹಸುಗಳನ್ನು ಸಾಕುವುದರ ಮೂಲಕ ಅಭಿವೃದ್ಧಿಯೊಂದಿಗೆ ಮುನ್ನಡೆಯಬೇಕೆಂದು ಹೇಳಿದ ಅವರು ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕೆಂದರು.
ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ನಬಾರ್ಡ್ ಮೂಲಕ ಅಂದಾಜು ರೂ. ೩೭ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಪಶು ಚಿಕಿತ್ಸಾಲಯ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್, ವೈದ್ಯರುಗಳಾದ ಪ್ರಸನ್ನ, ನವೀನ್ ಕುಮಾರ್, ಸುನಿಲ್, ಚಂದ್ರಶೇಖರ್, ಭಾಗೀರಥಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಸದಸ್ಯರುಗಳಾದ ಕುಂಞಣ್ಣ, ಸರಸ್ವತಿ, ಚಂದ್ರ, ಶೋಭಾ, ಕಾಫಿ ಬೆಳೆಗಾರ ಮಿಟ್ಟು ನಂಜಪ್ಪ, ರಘು ಕರುಂಬಯ್ಯ, ಜಯ, ಚಿಮ್ಮಿ, ಕಲಾವಿದ ಬಾವಾ ಮಾಲ್ದಾರೆ ಸೇರಿದಂತೆ ಮತ್ತಿತರರು ಇದ್ದರು.