ಶ್ರೀಮAಗಲ, ಅ. ೧೩: ಕೃಷಿ ಹಾಗೂ ತೋಟಗಾರಿಕಾ ಜಿಲ್ಲೆಯಾಗಿರುವ ಕೊಡಗಿನಲ್ಲಿ ರಸಗೊಬ್ಬರ ದಾಸ್ತಾನು ಅಗತ್ಯವಿದೆ. ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಒದಗಿಸಲು ಹಾಗೂ ರಸಗೊಬ್ಬರದ ಕೊರತೆ ಹಾಗೂ ಅಲಭ್ಯತೆ ಕಾಡದಂತೆ ಸಾಕಷ್ಟು ರಸಗೊಬ್ಬರ ದಾಸ್ತಾನುವಿಗೆ ಗೋದಾಮುಗಳ ಅಗತ್ಯತೆ ಇದ್ದು, ಈ ಭಾಗದ ಜನರಿಗೆ ಹೊಸ ಗೋದಾಮು ನಿರ್ಮಾಣದಿಂದ ಅನುಕೂಲವಾಗಲಿದೆ ಎಂದು ಸಂಸದ ಪ್ರತಾಪ್ಸಿಂಹ ಹೇಳಿದರು
ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಬಾಡಗರಕೇರಿ ಪೊರಾಡು ಗ್ರಾಮದಲ್ಲಿ ನೂತನವಾಗಿ ರೂ. ೬೫ ಲಕ್ಷ ನಬಾರ್ಡ್ ಅನುದಾನದಲ್ಲಿ ನಿರ್ಮಿಸಿರುವ ಗೋದಾಮನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯಿಂದ ರಸ್ತೆಗಳು ವ್ಯಾಪಕವಾಗಿ ಹಾನಿಯಾಗಿವೆ. ಒಂದೆರಡು ತಿಂಗಳಲ್ಲಿ ಇವುಗಳನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು.
ಕುಶಾಲನಗರದಿಂದ ಸಂಪಾಜೆವರೆಗೆ, ಮಡಿಕೇರಿಯಿಂದ ಕುಟ್ಟದವರೆಗೆ ರಸ್ತೆಯನ್ನು ರಾಷ್ಟಿçÃಯ ಹೆದ್ದಾರಿಯನ್ನಾಗಿ ಅಗಲೀಕರಣ ಮಾಡುವ ಯೋಜನೆ ಪ್ರಸ್ತಾವನೆ ಇದೆ. ರಸ್ತೆ ಬದಿಯಲ್ಲಿರುವ ಯಾವುದೇ ಮನೆ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಎರಡು ಕಡೆ ಕೆಲವು ಅಡಿಗಳಷ್ಟು ಮಾತ್ರ ವಿಸ್ತಾರ ಮಾಡಿ ಹೆಚ್ಚಿನ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದರು.
ಶಾಸಕ ಕೆ.ಜಿ. ಬೋಪಯ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರಿಗೆ ಸೌಲಭ್ಯ ಒದಗಿಸುವಲ್ಲಿ ಸಹಕಾರ ಸಂಘಗಳು ಮುಂಚೂಣಿಯಲ್ಲಿವೆ. ರೈತರಿಗೆ ತುರ್ತಾಗಿ ಸಾಲ ಪಡೆಯಲು ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಹೆಚ್ಚಿನ ದಾಖಲಾತಿ ಕೊಡಬೇಕು. ಆದರೆ, ಸಹಕಾರ ಸಂಘದಲ್ಲಿ ವಿಶ್ವಾಸದಿಂದ ಮತ್ತು ಸರಳ ದಾಖಲಾತಿ ಮೂಲಕ ಸಾಲ ಲಭ್ಯವಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಸಹಕಾರ ಸಂಘಗಳಲ್ಲಿ ಫ್ರೂಟ್ಸ್ ತಂತ್ರಾAಶದ ಮೂಲಕ ಸಾಲ ಪಡೆದರೆ ಮಾತ್ರ ಸರ್ಕಾರದ ಎಲ್ಲಾ ಸಹಾಯಧನ ಮತ್ತು ಸೌಲಭ್ಯ ಪಡೆಯಲು ಸಾಧ್ಯವಿದೆ. ಕಾಫಿಯನ್ನು ಫ್ರೂಟ್ಸ್ ತಂತ್ರಾAಶಕ್ಕೆ ಸೇರಿಸಲು ಪ್ರಯತ್ನ ನಡೆದಿದೆ. ಕಾಫಿಯನ್ನು ಕೃಷಿ ಬೆಳೆ ಎಂದು ಪರಿಗಣಿಸಲು ರೈತರ ಒತ್ತಾಯವಿದೆ ಎಂದು ಹೇಳಿದರು.
(ಮೊದಲ ಪುಟದಿಂದ) ಗೋದಾಮಿನ ಶಿಲಾಫಲಕವನ್ನು ಅನಾವರಣಗೊಳಿಸಿ ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ ಮಾತನಾಡಿ, ಸಹಕಾರ ಸಂಘಗಳಿAದ ಸೌಲಭ್ಯ ಪಡೆದ ರೈತರು ಅಭಿವೃದ್ಧಿ ಕಂಡಿದ್ದಾರೆ. ಹಾಗೆಯೇ ಸಹಕಾರ ಸಂಘಗಳು ಸಹ ಲಾಭಗಳಿಸಿವೆ. ಜಿಲ್ಲೆಯಲ್ಲಿ ಶೇ. ೯೦ ರಷ್ಟು ಸಹಕಾರ ಸಂಘಗಳು ಲಾಭದಲ್ಲಿ ನಡೆಯುತ್ತಿದೆ. ರೈತರು ಕೂಡ ಸಹಕಾರ ಸಂಘದಿAದ ಸಾಲವನ್ನು ಪಡೆದು ಪ್ರಾಮಾಣಿಕವಾಗಿ ಮರುಪಾವತಿಸುತ್ತ ಬರುತ್ತಿರುವು ದರಿಂದ ಜಿಲ್ಲೆಯ ಸಹಕಾರ ಸಂಘಗಳು ಅಭಿವೃದ್ಧಿ ಕಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಸಹಕಾರ ಸಂಘ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಎಂಎಸ್ಸಿ ನಬಾರ್ಡ್ ಯೋಜನೆಯ ಅನುದಾನದಲ್ಲಿ ಗೋದಾಮು ಮಾತ್ರವಲ್ಲದೆ ಸಹಕಾರ ಸಂಘಗಳು ಶಿಥಿಲೀಕರಣ ಘಟಕ, ಪೆಟ್ರೋಲ್ ಬಂಕು, ದಾಸ್ತಾನು ಮಳಿಗೆ ನಿರ್ಮಿಸಲು ಸಹ ಅವಕಾಶ ಇದೆ. ಈ ಹಿಂದೆ ಸಹಕಾರ ಸಂಘಗಳಿಗೆ ಮಾತ್ರ ಎಂಎಸ್ಸಿಯಲ್ಲಿ ಗೋದಾಮುಗಳಿಗೆ ಸಾಲ ಪಡೆಯಲು ಅವಕಾಶ ಇತ್ತು. ಆದರೆ, ಈಗ ಎಪಿಸಿಎಂಎಸ್ಗಳಿಗೂ ಸಹ ಅವಕಾಶವಿದೆ ಎಂದು ವಿವರಿಸಿದರು. ೨೦೧೮ರಲ್ಲಿ ಘೋಷಣೆಯಾದ ಸಾಲ ಮನ್ನಾ ಯೋಜನೆ ಅಡಿ ಸಹಕಾರ ಸಂಘಕ್ಕೆ ಸರ್ಕಾರದಿಂದ ಅನುದಾನ ಬರಲು ಬಾಕಿ ಇದೆ ಅದನ್ನು ಬೇಗ ಬಿಡುಗಡೆ ಮಾಡಲು ಶಾಸಕರಲ್ಲಿ ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ನೆಲ್ಲಿರ ಚಲನ್ಕುಮಾರ್ ಅವರು ಜಿಲ್ಲೆಯ ಗಡಿ ಭಾಗದಲ್ಲಿರುವ ಬಿರುನಾಣಿ ವ್ಯಾಪ್ತಿಯ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಗೋದಾಮನ್ನು ನಿರ್ಮಿಸಲಾಗಿದೆ. ದೂರದಿಂದ ರಸಗೊಬ್ಬರ ತರುವುದಕ್ಕೆ ರೈತರಿಗೆ ಸಾರಿಗೆ ವೆಚ್ಚ ಹಾಗೂ ಇನ್ನಿತರ ವೆಚ್ಚಗಳು ಹೊರೆಯಾಗುವುದು ಇದರಿಂದ ತಪ್ಪಲಿದೆ ಎಂದು ಹೇಳಿದರು.
ಈ ಸಂದರ್ಭ ಸಹಕಾರ ಸಂಘಕ್ಕೆ ೧೯೩೫ ರಲ್ಲಿ ೬೭ ಸೆಂಟು ಜಾಗ ದಾನ ನೀಡಿದ ಮಲ್ಲೇಂಗಡ ಕುಟುಂಬದ ಪರವಾಗಿ ಕುಟುಂಬದ ಅಧ್ಯಕ್ಷ ಮಲ್ಲೇಂಗಡ ಐ ಕಾರ್ಯಪ್ಪ (ಗಾಂಧಿ) ಮತ್ತು ಬಿರುನಾಣಿ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಶತಾಯುಷಿ ಕುಪುö್ಪಡೀರ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರಾದ ಹೆಚ್.ಎನ್. ರಮೇಶ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ್ ಬಾಬು, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಇ. ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಂಗಡ ರೀನಾ, ಉಪಾಧ್ಯಕ್ಷ ಅಮ್ಮತಿರ ರಾಜೇಶ್, ಸಹಕಾರ ಸಂಘದ ಉಪಾಧ್ಯಕ್ಷ ಗುಡ್ಡಮಾಡ ಸುಬ್ರಮಣಿ ಮತ್ತು ನಿರ್ದೇಶಕರು ಹಾಜರಿದ್ದರು.
ಮಲ್ಲೇಂಗಡ ಪೂಜಾ ಅವರು ಪ್ರಾರ್ಥಿಸಿ ಸಂಘದ ನಿರ್ದೇಶಕಿ ಅಮ್ಮತೀರ ರೇವತಿ ಅವರು ಸ್ವಾಗತಿಸಿ, ಕಾರ್ಯನಿರ್ವಹಣಾಧಿಕಾರಿ ಭಾರತಿ ಅವರು ವಂದಿಸಿದರು.