ಸೋಮವಾರಪೇಟೆ, ಅ.೧೩: ಕಳೆದ ೨ ದಿನಗಳ ಹಿಂದೆ ಕರ್ತವ್ಯದಲ್ಲಿದ್ದ ಸಂದರ್ಭವೇ ಹೃದಯಾ ಘಾತಕ್ಕೀಡಾಗಿ ವಿಧಿವಶರಾದ ಸೋಮವಾರಪೇಟೆ ಸಮೀಪದ ತಾಕೇರಿ ಗ್ರಾಮ ನಿವಾಸಿ ನಾಪಂಡ ಸಿ. ಮಹೇಶ್ ಅವರ ಪಾರ್ಥೀವ ಶರೀರ ಇಂದು ಹುಟ್ಟೂರಿಗೆ ಆಗಮಿಸಿತು.ಸೇನೆಯ ಅಧಿಕಾರಿಗಳು ಹಾಗೂ ಕುಟುಂಬಸ್ಥ ರೊಂದಿಗೆ ಪಟ್ಟಣಕ್ಕೆ ಸಂಜೆ ೬.೧೫ರ ಸುಮಾರಿಗೆ ಆಗಮಿಸಿದ ಯೋಧ ಮಹೇಶ್ ಅವರ ಮೃತದೇಹವನ್ನು ಇಲ್ಲಿನ ಜೇಸೀ ವೇದಿಕೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಈ ಸಂದರ್ಭ ಮೃತ ಮಹೇಶ್ ಅವರ ಪತ್ನಿ ವಿನಂತಿ ಸೇರಿದಂತೆ ಕುಟುಂಬ ಸದಸ್ಯರು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಜೀವ ವೈವಿಧ್ಯ ನಿಗಮದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಡಿವೈಎಸ್‌ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಜೈಜವಾನ್ ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೇರಿದಂತೆ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಗೌರವ ಸಮರ್ಪಣೆ ಮಾಡಿದರು.

(ಮೊದಲ ಪುಟದಿಂದ) ಕಳೆದ ತಾ. ೧೧ರಂದು ಉತ್ತರಾಖಂಡ್‌ನಲ್ಲಿ ಸೇವೆಯಲ್ಲಿದ್ದ ಸಂದರ್ಭವೇ ತಾಲೂಕಿನ ತಾಕೇರಿ ಗ್ರಾಮದ ನಾಪಂಡ ದಿ. ಚಂಗಪ್ಪ ಅವರ ಪುತ್ರ ಎನ್.ಸಿ. ಮಹೇಶ್(೪೬) ಅವರಿಗೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ ಅವರ ಮೃತದೇಹವನ್ನು ನಿನ್ನೆ ದಿನ ಡೆಹರಾಡೂನ್‌ನಿಂದ ಸ್ವೀಕರಿಸಿ ಇಂದು ಬೆಂಗಳೂರು ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು.

ಸುಬೇದಾರ್ ವಿ. ಮಣಿ, ಹವಾಲ್ದಾರ್ ಪ್ರಸಾದ್, ನಾಯಕ್ ಟಿ.ಆರ್. ರಾಹುಲ್ ಅವರೊಂದಿಗೆ ಎಂಇಜಿ ನಿವೃತ್ತ ಸಿಬ್ಬಂದಿ ಮಡಿಕೇರಿಯ ನಂದಿನೆರವAಡ ಕರುಂಬಯ್ಯ ಅವರು ಬೆಂಗಳೂರಿನಿAದ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಹುಟ್ಟೂರಿಗೆ ಕರೆತಂದರು.

ಪಟ್ಟಣಕ್ಕೆ ಯೋಧನ ಪಾರ್ಥೀವ ಶರೀರ ಆಗಮಿಸುವ ಸುದ್ದಿ ತಿಳಿದಂತೆ ನೂರಾರು ಮಂದಿ ಪಟ್ಟಣದಲ್ಲಿ ಜಮಾವಣೆಗೊಂಡರು. ಜೇಸೀ ವೇದಿಕೆಯ ಮುಂಭಾಗಕ್ಕೆ ಆ್ಯಂಬ್ಯುಲೆನ್ಸ್ ಆಗಮಿಸುತ್ತಿದ್ದಂತೆ ‘ಭಾರತ್ ಮಾತಾ ಕೀ ಜೈ, ಅಮರ್ ರಹೇ ಅಮರ್ ರಹೇ ಜೆಸಿಓ ಮಹೇಶ್ ಅಮರ್ ರಹೇ’ ಎಂದು ಘೋಷಣೆಗಳನ್ನು ಮೊಳಗಿಸಿ, ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭ ಮೃತ ಮಹೇಶ್ ಅವರ ಪತ್ನಿ ಹಾಗೂ ಕುಟುಂಬಸ್ಥರು ಕಣ್ಣೀರಿನೊಂದಿಗೆ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ನಂತರ ಪಾರ್ಥೀವ ಶರೀರವನ್ನು ಸ್ವಗ್ರಾಮ ತಾಕೇರಿಗೆ ಕೊಂಡೊಯ್ಯಲಾಯಿತು.

ತಾ. ೧೪ರಂದು (ಇಂದು) ಕಿರಗಂದೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಉತ್ತರಾಖಂಡ್‌ನ ಜೋಷಿಮಟ್ ಎಂಬಲ್ಲಿ ಭಾರತೀಯ ಭೂ ಸೇನೆಯ ಇಎಂಇ (ಇಲೆಕ್ಟಾçನಿಕ್ಸ್ ಅಂಡ್ ಮೆಕಾನಿಕಲ್ ಇಂಜಿನಿಯರ್) ವಿಭಾಗದಲ್ಲಿ ಜೆಸಿಒ ಹುದ್ದೆಯಲ್ಲಿದ್ದ ಮಹೇಶ್ ಅವರು ಕಳೆದ ತಿಂಗಳು ಊರಿಗೆ ಬಂದು ತಾ.೧೦ರಂದು ಮತ್ತೆ ಸೇವೆಗೆ ವಾಪಾಸ್ಸಾಗಿದ್ದರು.

ಮುಂದಿನ ನಾಲ್ಕು ವರ್ಷದಲ್ಲಿ ನಿವೃತ್ತಿ ಹೊಂದಲಿದ್ದ ಮಹೇಶ್ ಅವರು, ಕರ್ತವ್ಯಕ್ಕೆ ತೆರಳಿದ ಎರಡು ದಿನದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಮೃತರು ತಾಯಿ ಮಲ್ಲಿಗೆ, ಪತ್ನಿ ವಿನಂತಿ, ಮಕ್ಕಳಾದ ೧೦ ವರ್ಷ ಪ್ರಾಯದ ತೀಶ್ಮ ಹಾಗೂ ೬ ವರ್ಷದ ಕವನ್ ಅವರುಗಳನ್ನು ಅಗಲಿದ್ದಾರೆ.

೧೯೯೯ರಲ್ಲಿ ಸೇನೆಗೆ ಸೇರ್ಪಡೆಗೊಂಡ ಮಹೇಶ್ ಅವರು, ಹೈದರಾಬಾದ್, ಬೆಂಗಳೂರು, ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ, ಇದೀಗ ಉತ್ತರಾಖಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ನೂತನ ಮನೆಯನ್ನು ನಿರ್ಮಿಸಿ, ಅದರಲ್ಲಿ ಕುಟುಂಬದೊAದಿಗೆ ವಾಸವಿದ್ದರು. ಮುಂದಿನ ೪ ವರ್ಷಗಳಲ್ಲಿ ನಿವೃತ್ತಿಯಾಗಲಿದ್ದ ಅವರು ಹೃದಯಾಘಾತಕ್ಕೀಡಾಗಿ ವಿಧಿವಶರಾಗಿದ್ದು, ಕುಟುಂಬ ಹಾಗೂ ಗ್ರಾಮದಲ್ಲಿ ಶೋಕಸಾಗರ ಮಡುಗಟ್ಟಿದೆ.