ಸೋಮವಾರಪೇಟೆ, ಅ. ೧೪: ತಾಲೂಕು ಪಂಚಾಯಿತಿ ಕೆಡಿಪಿ ಸಭೆ ಆಡಳಿತಾಧಿಕಾರಿ ರಾಜಗೋಪಾಲ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಾಲಂಬಿ ಆಶ್ರಮ ಶಾಲೆಯಲ್ಲಿ ರೂ. ೮೦ ಲಕ್ಷದಲ್ಲಿ ನೂತನವಾಗಿ ಶಾಲಾ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇಂದಿಗೂ ಕಾಮಗಾರಿ ಮುಗಿದಿಲ್ಲ. ಇಲ್ಲಿಯೇ ವಿದ್ಯಾರ್ಥಿಗಳು ಆಟವಾಡುತ್ತಿ ರುವುದರಿಂದ ಕಟ್ಟಡಕ್ಕೆ ಅಳವಡಿಸಿರುವ ಗಾಜು ಒಡೆದು ಹೋಗಿದೆ.

ಕಟ್ಟಡಕ್ಕೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಿಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಿದೆ ಎಂದು ನಾಮನಿರ್ದೇಶಿತ ಸದಸ್ಯ ಪಿ.ಎನ್. ಗಂಗಾಧರ್ ದೂರಿದರು. ಜಿಲ್ಲಾ ಪಂಚಾಯಿತಿ ಎಇಇ ವೀರೆಂದ್ರ ಇದಕ್ಕೆ ಉತ್ತರಿಸಿ, ಕಟ್ಟಡ ಪೂರ್ಣ ಗೊಳ್ಳದಿದ್ದರೂ, ಇಲ್ಲಿಯೇ ತರಗತಿ ಪ್ರಾರಂಭವಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸುವುದಾಗಿ ತಿಳಿಸಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್, ೨೦೨೨-೨೩ನೇ ಸಾಲಿನಲ್ಲಿ ಹನಿ ನೀರಾವರಿಗೆ ಅರ್ಜಿ ಗಳನ್ನು ಸ್ವೀಕರಿಸಲಾಗುತ್ತಿದೆ.

ಇಲಾಖೆಯಿಂದ ಅನುಮೋದನೆ ಗೊಂಡ ಕಂಪೆನಿಯಿAದ ರೈತರು ಹನಿ ನೀರಾವರಿ ಅಳವಡಿಸಿಕೊಳ್ಳಬೇಕು. ರಾಷ್ಟಿçÃಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಡ್ರಾಗನ್ ಫ್ರೂಟ್ ಮತ್ತು ಬೆಣ್ಣೆ ಹಣ್ಣು ಪ್ರದೇಶ ವಿಸ್ತರಣೆ, ಅಣಬೆ ಬೇಸಾಯ ಕಾರ್ಯ ಕ್ರಮಕ್ಕೆ ಗುರಿ ನಿಗದಿಪಡಿಸಲಾಗಿದೆ. ಹೋಬಳಿವಾರು ಗುರಿಗಳಂತೆ ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ಆಯ್ಕೆ ಪ್ರಗತಿ ಸಾಧಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖಾಧಿ ಕಾರಿಗಳು ಪಾಲ್ಗೊಂಡು ತಮ್ಮ ಇಲಾಖೆಗೆ ಸಂಬAಧಿಸಿದAತೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಜಯಣ್ಣ ಹಾಗೂ ನಾಮನಿರ್ದೇಶಿತ ಸದಸ್ಯರು ಇದ್ದರು.