ಮಡಿಕೇರಿ, ಅ. ೧೪ : ಹಿಂದೂ ಮಲಯಾಳಿ ಸಂಘದ ಮಡಿಕೇರಿ ಘಟಕದ ವತಿಯಿಂದ ಓಣಾಘೋಷಂ -ಓಣಂ ಸದ್ಯ ೨೦೨೨ರ ಪ್ರಯುಕ್ತ ಸದಸ್ಯರು ಹಾಗೂ ಕುಟುಂಬದವರಿಗೆ ವಿವಿಧ ಕ್ರೀಡಾಕೂಟ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್; ನವೆಂಬರ್ ೧ರಂದು ನಡೆಯಲಿರುವ ಓಣಾಘೋಷಂ-ಓಣA ಸದ್ಯ ಪ್ರಯುಕ್ತ ತಾ.೨೩ರಂದು ಕ್ರೀಡಾಕೂಟ ಏರ್ಪಡಿಸಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಅಂದು ಬೆಳಿಗ್ಗೆ ೯ಗಂಟೆಗೆ ಹಟ್ಟಿಹೊಳೆಯ ಬೆಳೆಗಾರ ಗೌತಂ ಹಾಗೂ ಮಕ್ಕಂದೂರಿನ ಬೆಳೆಗಾರ ಸಿ.ಪಿ.ಪ್ರಮೋದ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಪುರುಷರಿಗೆ ಕ್ರಿಕೆಟ್ ಪಂದ್ಯಾವಳಿ, ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಮಡಿಕೆ ಒಡೆಯುವದು, ಪುರುಷರಿಗೆ ಗೋಣಿಚೀಲದ ಓಟ, ಕಾಲು ಕಟ್ಟಿ ಓಟ, ಮಹಿಳೆಯರಿಗೆ ನಿಂಬೆ ಚಮಚ ಓಟ, ಸೂಜಿ ನೂಲಿನ ಓಟ, ಬಲೂನ್ ಒಡೆಯುವದು, ಪಾಸಿಂಗ್ ದಿ ಬಾಲ್, ಬಾಂಬ್ ಇನ್ ದಿ ಸಿಟಿ ಹಾಗೂ ೬೦ ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ವೇಗದ ನಡಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸದಸ್ಯರ ಮಕ್ಕಳಿಗೆ ೧ರಿಂದ ೪ರವರೆಗೆ ಕಾಳು ಹೆಕ್ಕುವದು, ೫ರಿಂದ ೬ ಕಾಳು ಹೆಕ್ಕುವದು, ೧ರಿಂದ ೪ರವರೆಗಿನವರಿಗೆ ಹೂವಿನ ರಂಗೋಲಿ ಚಿತ್ರಕಲಾ ಸ್ಪರ್ಧೆ, ೫ರಿಂದ ೭ರವರೆಗೆ ಮಹಾಬಲಿ ಚಕ್ರವರ್ತಿಯ ಚಿತ್ರಕಲೆ, ೧ರಿಂದ ೭ರವರೆಗೆ ಬಕೆಟ್‌ಗೆ ಚೆಂಡು ಹಾಕುವದು, ೮ ರಿಂದ ೧೨ರವರೆಗಿನವರಿಗೆ ಗೋಣಿ ಚೀಲದ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ನವೆಂಬರ್ ಒಂದರAದು ಓಣಾಘೋಷಂ-ಓಣA ಸದ್ಯ ಕಾರ್ಯಕ್ರಮ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ನಡೆಯಲಿದ್ದು, ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾ ರೋಹಣ ಕೂಡ ಮಾಡಲಾಗುವದು. ಅಲ್ಲದೆ, ಅಂದು ಬೆಳಿಗ್ಗೆ ೭ ರಿಂದ ೯ ಗಂಟೆವರೆಗೆ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆ ಏರ್ಪಡಿಸಲಾಗಿದೆ. ಬೆಳಿಗ್ಗೆ ೯.೩೦ಗಂಟೆಗೆ ಗಾಂಧಿ ಮೈದಾನದಿಂದ ಕಾವೇರಿ ಹಾಲ್‌ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಅಂದಿನ ಕಾರ್ಯಕ್ರಮದಲ್ಲಿ ಬಹುಮಾನ

(ಮೊದಲ ಪುಟದಿಂದ) ವಿತರಣೆ ಮಾಡಲಾಗುವದೆಂದು ರಮೇಶ್ ತಿಳಿಸಿದರು. ಇದೇ ಸಂದರ್ಭದಲ್ಲಿ ಸಮುದಾಯದ ಮಾಜಿ ಸೈನಿಕರನ್ನು ಸನ್ಮಾನಿಸಲಾಗುವದು. ೨೦೨೦, ೨೧, ೨೨ನೇ ಸಾಲಿನಲ್ಲಿ ೧೦ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಪ್ರೋತ್ಸಾಹ ಧನದೊಂದಿಗೆ ಗೌರವಿಸಲಾಗುವದು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಪೂಕಳಂ ಸ್ಪರ್ಧೆಗೆ ಅರವಿಂದ್ ಆರ್. (೯೯೦೦೮೮೧೨೪), ಅನಿಲ್ ಕೆ.ಕೆ.(೯೬೬೩೦೨೮೮೨೩), ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಅಶೋಕ್(೭೨೫೯೬೪೩೦೩೪), ದಿನೇಶ್ ಎಂ.ಎಸ್.(೯೪೪೮೩೭೦೯೯೩), ಪ್ರತಿಭಾ ಪುರಸ್ಕಾರಕ್ಕೆ ಪಿ.ವಿ.ಸುಬ್ರಮಣಿ(೯೯೦೦೩೯೨೩೩೨) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಓಣಾಘೋಷಂ-ಓಣA ಸದ್ಯ ಸಮಿತಿ ಅಧ್ಯಕ್ಷ ವಾಸುದೇವ, ಮಹಿಳಾ ಘಟಕದ ಅಧ್ಯಕ್ಷೆ ಲತಾರಾಜನ್, ಕ್ರೀಡಾ ಸಮಿತಿ ಅಧ್ಯಕ್ಷ ಅಶೋಕ್, ಯುವ ಘಟಕದ ಅಧ್ಯಕ್ಷ ದಿನೇಶ್ ಹಾಜರಿದ್ದರು.