ಕೂಡಿಗೆ, ಅ. ೧೩: ಕಳೆದ ೬ ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಬೆಣಗಲು ಗ್ರಾಮದ ಚಿಣ್ಣಮ್ಮ (೮೦) ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಕಾವೇರಿ ನದಿಯ ದಂಡೆಯಲ್ಲಿ ಮೃತದೇಹ ಕಂಡುಬAದಿದೆ. ಮಹಿಳೆ ಕಾಣೆಯಾದ ಪ್ರಕರಣವು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.