ಮಡಿಕೇರಿ, ಅ. ೧೨: ಗೋಣಿಕೊಪ್ಪ ಕಡೆಯಿಂದ ಪಿರಿಯಾಪಟ್ಟಣ ಕಡೆಗೆ ಲಾರಿಯಲ್ಲಿ (ಏಐ. ೫೫ ಉ ೩೨೪೧) ೩೯ ಹಲಸು ಮರದ ದಿಮ್ಮಿಗಳನ್ನು ಅಕ್ರಮವಾಗಿ ತುಂಬಿಸಿಕೊAಡು ಹೋಗುತ್ತಿರುವು ದಾಗಿ ಸಿಕ್ಕಿದ ಖಚಿತ ಮಾಹಿತಿಯ ಮೇರೆಗೆ ತಿತಿಮತಿ ಬಳಿ ವೀರಾಜಪೇಟೆ ಸಿ.ಐ.ಡಿ. ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿ ರೂ. ೮ ಲಕ್ಷ ಮೌಲ್ಯದ ಲಾರಿ ಮತ್ತು ರೂ. ೪.೫೦,೦೦೦ ಲಕ್ಷ ಮೌಲ್ಯದ ಹಲಸು ಮತ್ತು ಹೆಬ್ಬಲಸು ಮರವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬAಧ ಕೇರಳದ ಕ್ಯಾಲಿಕಟ್‌ನ ಅಬ್ದುಲ್ ಶುಕೂರ್ ಎಂಬಾತನನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿ.ಐ.ಡಿ. ಪೊಲೀಸ್ ಹೆಚ್ಚುವರಿ ಮಹಾ ನಿರೀಕ್ಷಕ ಕೆ.ವಿ. ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ಘಟಕದ ಅಧೀಕ್ಷಕ ಕೆ.ವಿ. ವಿಶ್ವನಾಥ್ ಅವರ ಮಾರ್ಗದರ್ಶನಲ್ಲಿ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕ ಸವಿ ಸಿ.ಯು., ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನಾ, ಪಿ.ಬಿ. ಕುಶ, ಪಿ.ಯು. ಮುನೀರ್, ಆರ್. ನಂದ ಕುಮಾರ್ ಭಾಗವಹಿಸಿದ್ದರು.