(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಅ. ೧೨: ದಕ್ಷಿಣ ಕೊಡಗಿನಲ್ಲಿ ರೈತರನ್ನು ಬೆಚ್ಚಿ ಬೀಳಿಸಿದ್ದ ಮೂರು ಹುಲಿಗಳು ಬಹುತೇಕ ಸಮೀಪದ ನಾಗರಹೊಳೆಯ ರಾಷ್ಟಿçÃಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಾಪಸ್ಸಾಗಿರ ಬಹುದೆಂದು ಊಹಿಸಲಾಗಿದೆ. ಕಳೆದ ೫ ದಿನಗಳಿಂದ ದಕ್ಷಿಣ ಕೊಡಗಿನ ಯಾವುದೇ ಪ್ರದೇಶದಲ್ಲಿ ಹುಲಿ ಸಂಚಾರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದ ರೈತರ ತೋಟದಲ್ಲಿ ಅಳವಡಿಸಿದ್ದ ಮೂರು ಬೋನುಗಳತ್ತ ಹುಲಿಗಳು ಸುಳಿಯಲಿಲ್ಲ. ಸಮೀಪದ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಕಳೆದ ೫ ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಹುಲಿ ಸಂಚರಿಸುವ ದೃಶ್ಯ ಸೆರೆಯಾಗಿತ್ತು. ಇದನ್ನು ಹೊರತುಪಡಿಸಿ ಇಲ್ಲಿಯ ತನಕ ಹುಲಿಯ ಸಂಚಾರದ ಬಗ್ಗೆ ಬೇರೆ ಯಾವುದೇ ಮಾಹಿತಿ ಇಲಾಖೆಗೆ ಲಭ್ಯವಾಗಿಲ್ಲ. ಹುಲಿಯ ಸಂಚಾರ ಕಡಿಮೆಯಾಗುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಕಾಫಿ ತೋಟದಲ್ಲಿ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಗ್ರಾಮದಿಂದ ಹುಲಿಯು ಅರಣ್ಯ ಪ್ರದೇಶಕ್ಕೆ ಮರಳಿರಬಹುದೆಂಬ ನಂಬಿಕೆಯಿAದ ಕಾರ್ಮಿಕರು ತೋಟಗಳಲ್ಲಿ ಧೈರ್ಯವಾಗಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಹುಲಿ ಸಂಚಾರದ ಬಗ್ಗೆ ಸುಳಿವಿಲ್ಲದಿದ್ದರೂ ಎಸಿಎಫ್ ನೆಹರು, ಪೊನ್ನಂಪೇಟೆ ಆರ್‌ಎಫ್‌ಓ ಶಂಕರ್ ಹಾಗೂ ಆರ್‌ಆರ್‌ಟಿ ತಂಡ ಹುಲಿ ಸಂಚಾರದ ಸ್ಥಳಗಳಲ್ಲಿ ಕೂಂಬಿAಗ್ ಕಾರ್ಯಾಚರಣೆ ಮುಂದುವರೆಸುತ್ತಿದ್ದು ಹುಲಿಯ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಅರಣ್ಯದತ್ತ ಹುಲಿಗಳು ತೆರಳಿರಬಹುದೇ ಎಂಬ ಮಾಹಿತಿಗಳನ್ನು ಸಂಗ್ರಹಿಸಲು ತಮ್ಮ ಪ್ರಯತ್ನವನ್ನು ಮುಂದುವರೆಸಿದೆ.
ಜಾನುವಾರುಗಳನ್ನು ಕಳೆದುಕೊಂಡ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಸಿಗುವ ಪರಿಹಾರದ ಚೆಕ್‌ಅನ್ನು ರೈತರ ಮನೆಗಳಿಗೆ ತೆರಳಿ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿಗಳಾದ ಶಂಕರ್ ಹಾಗೂ ಸಿಬ್ಬಂದಿ ವಿತರಿಸಿದರು. ತಮ್ಮ ಜಾನುವಾರುಗಳನ್ನು ಸುರಕ್ಷತೆಯಿಂದ ಹುಲಿಯ ಸಂಚಾರದ ಕುರುಹುಗಳು ಸದ್ಯಕ್ಕೆ ಸಿಬ್ಬಂದಿಗಳಿಗೆ ಲಭ್ಯವಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಗಳು, ಆರ್‌ಆರ್‌ಟಿ ತಂಡ ತಮ್ಮ ಕೂಂಬಿAಗ್ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಹಿರಿಯ ಅಧಿಕಾರಿಗಳ ಸೂಚನೆಯನ್ನು ಪಾಲಿಸಲಾಗುತ್ತಿದ್ದು ರೈತರಿಗೆ ಹುಲಿಯ ಸಂಚಾರದ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಇಲಾಖೆಯ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಜಾನುವಾರುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ ಪರಿಹಾರದ ಹಣವನ್ನು ಚೆಕ್ ಮೂಲಕ ನೀಡಲಾಗಿದೆ.
-ಶಂಕರ್ ಆರ್‌ಎಫ್‌ಓ, ಪೊನ್ನಂಪೇಟೆ ಕಾರ್ಯಾಚರಣೆಗೆ ಆಯಾಕಟ್ಟಿನ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅಲ್ಲದೆ ಪರಿಹಾರವನ್ನು ವಿತರಿಸುವ ಬಗ್ಗೆ ಭರವಸೆ ನೀಡಿದ್ದರು. ನೀಡಿದ ಭರವಸೆಯಂತೆ ಅಧಿಕಾರಿಗಳು ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರವನ್ನು ವಿತರಿಸಿದ್ದಾರೆ.
ಹುಲಿಯನ್ನು ಹಿಡಿದೇ ತೀರುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆ ನಡೆಸಿದರಾದರೂ ಹುಲಿಯ ಹೆಜ್ಜೆ ಗುರುತುಗಳು ಎಲ್ಲಿಯೂ ಕಾಣ ಸಿಗದಿರುವುದರಿಂದ ಹುಲಿಯ ಜಾಡು ಅರಸಿ ಹೋಗಲು ಸಾಧ್ಯವಾಗುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಎರಡು ಬೋನುಗಳನ್ನು ಆಯಾಕಟ್ಟಿನ ಪ್ರದೇಶದಲ್ಲಿ ಇಡಲಾಗಿದ್ದು ಇವುಗಳ ಮೇಲೆ ನಿಗಾವಹಿಸಲಾಗಿದೆ. ಕೂಂಬಿAಗ್ ಕಾರ್ಯಾಚರಣೆಯಲ್ಲಿ ದಿವಾಕರ್ ಡಿಆರ್‌ಎಫ್‌ಓ ಗಣೇಶ್ ಶೇಟ್, ರಕ್ಷಿತ್, ಮಂಜುನಾಥ್, ಚೇತನ್, ಸಂಜಯ್ ಚೌಹಾಣ್ ಸೇರಿದಂತೆ ಅರಣ್ಯ ಸಿಬ್ಬಂದಿಗಳು ಭಾಗವಹಿಸಿದ್ದಾರೆ.