ಸಿದ್ದಾಪುರ, ಅ. ೧೨: ನಂಜರಾಯಪಟ್ಟಣ ಎಸ್‌ಎನ್‌ಡಿಪಿ ಶಾಖೆ ವತಿಯಿಂದ ೩ನೇ ವರ್ಷದ ಓಣಂ ಆಚರಣೆ ತಾ. ೧೬ ರಂದು ಹೊಸಪಟ್ಟಣದ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪ್ರಮುಖರಾದ ನಂದಾ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಿಗ್ಗೆ ಪೂಕಳಂ ಸ್ಪರ್ಧೆ ನಡೆಯಲಿದ್ದು, ನಂತರ ಹೊಸಪಟ್ಟಣ ಮುತ್ತಪ್ಪ ದೇವಾಲಯದಿಂದ ಸಭಾಂಗಣದವರೆಗೆ ಶೋಭಯಾತ್ರೆ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಕೊಡಗು ಎಸ್‌ಎನ್‌ಡಿಪಿ ಯೋಗಂ ಅಧ್ಯಕ್ಷ ವಿ.ಕೆ. ಲೋಕೇಶ್, ಕೊಡಗು ಹಿಂದೂ ಮಲಯಾಳಿ ಒಕ್ಕೂಟದ ಅಧ್ಯಕ್ಷ ವಿ.ಎಂ. ವಿಜಯನ್, ಹಿಂದು ಮಾಲಯಾಳಿ ಒಕ್ಕೂಟದ ಗೌರವಾಧ್ಯಕ್ಷ ಕೆ.ಎಸ್. ರಮೇಶ್ ಆಗಮಿಸಲಿದ್ದಾರೆ. ಮಧ್ಯಾಹ್ನ ಎಲ್ಲರಿಗೂ ಓಣಂ ಸದ್ಯ ಇರಲಿದ್ದು ಮಧ್ಯಾಹ್ನದ ನಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.