ನಾಡಿನ ಜೀವನದಿ, ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಜರುಗುವ ತುಲಾಸಂಕ್ರಮಣ ತೀರ್ಥೋದ್ಭವ ಸಿದ್ಧತೆ ಸಂಬAಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಗರದ ಜಿ.ಪಂ. ಸಿಇಓ ಅವರ ಕಚೇರಿಯಲ್ಲಿ ತಾ. ೧೦ ರಂದು ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಸಚಿವರು, ಕೋವಿಡ್-೧೯ ಕಡಿಮೆಯಾಗಿರುವ ಹಿನ್ನೆಲೆ ಈ ಬಾರಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಗಮನಹರಿಸಬೇಕು. ಸಂಜೆ ವೇಳೆಯಲ್ಲಿ ತೀರ್ಥೋದ್ಭವ ಸಂಭವಿಸುವುದರಿAದ ಬೆಳಕಿನ ವ್ಯವಸ್ಥೆ, ಸುಗಮ ಸಾರಿಗೆ ಸಂಚಾರ ವ್ಯವಸ್ಥೆ, ಬಸ್ ಸೌಲಭ್ಯ ಹೀಗೆ ಮತ್ತಿತರ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದರು.
ಸಭೆಯ ಆರಂಭದಲ್ಲಿ ಪ್ರಮುಖರಾದ ಎಂ.ಬಿ. ದೇವಯ್ಯ ಅವರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡಿದ ಭಕ್ತಾದಿಗಳಿಗೆ ಪವಿತ್ರ ಕೊಳಕ್ಕೆ ತೆರಳಲು ಅವಕಾಶ ಮಾಡಬೇಕು ಎಂದು ಕೋರಿದರು.
ಇದಕ್ಕೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು, ಧ್ವನಿಗೂಡಿಸಿ ಭಕ್ತಾದಿಗಳಿಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗದAತೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.