ಮಡಿಕೇರಿ, ಅ. ೧೨: ಫ್ಯಾಷನ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚ್ಚೆಯಡÀ ಗಗನ್ ಗಣಪತಿ ಅವರಿಗೆ “ವಾಲ್ ಆಫ್ ಫೇಮ್” ಪ್ರಶಸ್ತಿ ಲಭಿಸಿದೆ.
ಮಿಸ್ ಸೌತ್ ಇಂಡಿಯಾ ಆಗಿ ಅಳಮೇಂಗಡ ದಿಶಾ ಚೆಂಗಪ್ಪ ಹಾಗೂ ಕುಪ್ಪಣಮಾಡ ಮೇಘನಾ ಆಯ್ಕೆಯಾಗುವ ಮೂಲಕ ಮಿಸ್ ಇಂಡಿಯಾ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ. ಮಿಸೆಸ್ ಸೌತ್ ಇಂಡಿಯಾ ಆಗಿ ಮಲ್ಲಮಾಡ ಶ್ಯಾಮಲಾ ಸುನಿಲ್ ಹಾಗೂ ಬಾನಂಗಡ ಭಾಗ್ಯ ಪ್ರದೀಪ್ ಆಯ್ಕೆಯಾಗುವ ಮೂಲಕ ಮಿಸೆಸ್ ಇಂಡಿಯಾ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ. ಬೆಂಗಳೂರಿನ ಹೊಟೇಲ್‌ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಇವರುಗಳು ಪ್ರಶಸ್ತಿ ಪಡೆದರು. ಸಾಹಿತಿ ಅಗ್ನಿ ಶ್ರೀಧರ್ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರಿನ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್, ಚಿತ್ರನಟ ಡಾಲಿ ಧನಂಜಯ್ ಮತ್ತಿತರರು ಉಪಸ್ಥಿತರಿದ್ದರು. ನಟಿ ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್ ಅವರೊಂದಿಗೆ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಕರುಣಾ ರಾವ್, ಕಲರ್ಸ್ ಟಿವಿ ನಿರೂಪಕ ನಿರಂಜನ್ ದೇಶಪಾಂಡೆ ಹಾಗೂ ರ‍್ಯಾಪ್ ಗಾಯಕ ಅಲೋಕ್ ಕೂಡ ಪ್ರಶಸ್ತಿ ಸ್ವೀಕರಿಸಿದರು.