ನಾಪೋಕ್ಲು, ಅ. ೧೩: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ೨೬ನೇ ವರ್ಷದ ಕಾವೇರಿ ರಥಯಾತ್ರೆಯು ತಾ.೧೭ ಮತ್ತು ೧೮ರಂದು ವೈಭವಯುತವಾಗಿ ಜರುಗಲಿದೆ ಎಂದು ಸಮಿತಿಯ ಸಂಚಾಲಕರಾದ ಎಂ.ರೋಜಿ ಚಿಣ್ಣಪ್ಪ ತಿಳಿಸಿದ್ದಾರೆ.
ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಾಲೂರಿನ ಶ್ರೀ ಸತ್ಯ ಹರಿಶ್ಚಂದ್ರ ದೇಗುಲದ ಜೀರ್ಣೋದ್ಧಾರಕ್ಕಾಗಿ ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಜನ್ಮಸ್ಥಳ ತಲಕಾವೇರಿಯ ಪಾವಿತ್ರö್ಯ ರಕ್ಷಣೆಗಾಗಿ ಕಳೆದ ೨೫ ವರ್ಷಗಳಿಂದ ಕಾವೇರಿ ರಥಯಾತ್ರೆಯನ್ನು ಹಮ್ಮಿಕೊಂಡು ಬರಲಾಗುತ್ತಿದೆ.
ಕೊಡಗಿನ ಕುಲದೇವತೆ ಮಾತೆ ಕಾವೇರಿ ಪ್ರತಿಮೆಯ ಭವ್ಯ ಪುಷ್ಪಾಲಂಕೃತ ರಥಯಾತ್ರೆಯು ತಾ.೧೭ರ ಬೆಳಗ್ಗೆ ೯ ಗಂಟೆಗೆ ಪಾಲೂರಿನ ಪಾಲೂರಪ್ಪ ದೇವರ ಸನ್ನಿಧಿಯಿಂದ ಆರಂಭವಾಗಲಿದ್ದು, ಬಳಿಕ ಬೆಟ್ಟಗೇರಿ, ಬಕ್ಕ, ಕಾರುಗುಂದ, ಕೊಟ್ಟೂರು, ಚೇರಂಬಾಣೆ, ತೊಟ್ಲುಕುಂಞ, ಕೋಪಟ್ಟಿ, ಚೆಟ್ಟಿಮಾನಿಗಾಗಿ ಮಧ್ಯಾಹ್ನ ೨.೩೦ ಗಂಟೆಗೆ ಭಾಗಮಂಡಲ ತಲುಪಲಿದೆ. ಬಳಿಕ ರಥಯಾತ್ರೆಯು ತಲಕಾವೇರಿಯ ಪವಿತ್ರ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲಿದೆ.
ತಾ.೧೮ರಂದು ಬೆಳಗ್ಗೆ ೬ಗಂಟೆಗೆ ಭಾಗಮಂಡಲದಿAದ ರಥಯಾತ್ರೆ ಆರಂಭಗೊAಡು ತೀರ್ಥಪ್ರಸಾದ ವಿತರಣೆಯೊಂದಿಗೆ ಅಯ್ಯಂಗೇರಿ, ಬಲ್ಲ, ಸಣ್ಣಪುಲಿಕೋಟು, ದೊಡ್ಡಪುಲಿಕೋಟು, ಪೇರೂರು, ಬಲ್ಲಮಾವಟಿ, ನೆಲಜಿ, ಚೋಣಕೆರೆ, ಹಳೇತಾಲೂಕಿಗಾಗಿ ಮಧ್ಯಾಹ್ನ ೧ ಗಂಟೆಗೆ ನಾಪೋಕ್ಲು ಪಟ್ಟಣಕ್ಕೆ ಆಗಮಿಸಲಿದ್ದು, ಬಳಿಕ ನಾಪೋಕ್ಲು ಮಾರ್ಗವಾಗಿ ಐತಿಹಾಸಿಕ ಪಾಲೂರು ಶ್ರೀ ಸತ್ಯಹರಿಶ್ಚಂದ್ರ ದೇವಾಲಯದ ಕಾವೇರಿನದಿಯಲ್ಲಿ ವಿಶೇಷ ಪೂಜೆಗಳೊಂದಿಗೆ ತಾಯಿ ಕಾವೇರಿ ಮಾತೆಯ ಕಳಶ ವಿಸರ್ಜನೆಯೊಂದಿಗೆ ರಥಯಾತ್ರೆ ಅಂತ್ಯಗೊಳ್ಳಲಿದೆ ಎಂದು ರೋಜಿ ಚಿಣ್ಣಪ್ಪ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮುಯ್ಯು ದೇವಯ್ಯ, ಚೋಕಿರ ಸುಧಿ ಅಪ್ಪಯ್ಯ, ಬಿದ್ದಾಟಂಡ ಮಮತ ಚಿಣ್ಣಪ್ಪ, ಕಲಿಯಾಟಂಡ ಸುಮಿ ದೇವಯ್ಯ ಉಪಸ್ಥಿತರಿದ್ದರು.