ಕೂಡಿಗೆ, ಅ. ೧೩: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಸಮೀಪದ ಕಲ್ಲುಕೆರೆಯಲ್ಲಿ ಮೀನು ಹಿಡಿಯಲು ಹಾಕಿದ ಬಲೆಗೆ ೧೫ ಅಡಿ ಉದ್ದದ ಹೆಬ್ಬಾವು ಸಿಲುಕಿದ ಘಟನೆ ನಡೆದಿದೆ.

ಇದನ್ನು ಕಂಡ ಸ್ಥಳೀಯರಾದ ಸ್ವರೂಪ್ ಕೂಡಿಗೆಯ ಸ್ನೇಕ್ ಗಫೂರ್‌ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಗಫೂರ್ ಸ್ಥಳೀಯರ ಮತ್ತು ಹೆಬ್ಬಾಲೆ ಉಪ ವಲಯ ಅರಣ್ಯ ಸಿಬ್ಬಂದಿಗಳ ಸಹಕಾರದೊಂದಿಗೆ ಹಾವನ್ನು ಬಲೆಯಿಂದ ರಕ್ಷಿಸಲಾಯಿತು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಜೇನು ಕಲ್ಲು ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿ ಭರತ್ ಅರಣ್ಯ ರಕ್ಷಕ ಲೋಕೇಶ್, ಸಹಾಯಕ ವೇದ ಹಾಜರಿದ್ದರು.